ಗುರುವಾರ , ಡಿಸೆಂಬರ್ 3, 2020
18 °C

ಐಎಸ್‌ಎಲ್‌: ಹೈದರಾಬಾದ್‌ ಎಫ್‌ಸಿ ಆಟಗಾರರ ತರಬೇತಿ ಆರಂಭ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಹೈದರಾಬಾದ್‌: ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಟೂರ್ನಿಗೆ ಪೂರ್ವಸಿದ್ಧತೆಯಾಗಿ ಹೈದರಾಬಾದ್‌ ಫುಟ್‌ಬಾಲ್‌ ಕ್ಲಬ್‌ (ಎಚ್‌ಎಫ್‌ಸಿ) ಆಟಗಾರರ ತರಬೇತಿ ಮಂಗಳವಾರ ಗೋವಾದ ಗೈರಿಮ್‌ನಲ್ಲಿ ಆರಂಭವಾಯಿತು. ತಂಡದ ಮುಖ್ಯ ಕೋಚ್‌ ಮ್ಯಾನೊಲೊ ಮಾರ್ಕ್ವೆಜ್‌ ಆಟಗಾರರಿಗೆ ಮಾರ್ಗದರ್ಶನ ನೀಡಿದರು.

ಸ್ಪೇನ್‌ ಮೂಲದ ಮಾರ್ಕ್ವೆಜ್‌ ಅವರು ಕಡ್ಡಾಯ ಕೋವಿಡ್‌–19 ತಡೆ ಮಾರ್ಗಸೂಚಿಗಳ ಅನ್ವಯ ಪ್ರತ್ಯೇಕವಾಸ ಪೂರ್ಣಗೊಳಿಸಿ ತರಬೇತುದಾರರ ತಂಡವನ್ನು ಸೇರಿಕೊಂಡಿದ್ದಾರೆ.

‘ದೀರ್ಘಕಾಲದಿಂದ ಫುಟ್‌ಬಾಲ್‌ನಿಂದ ದೂರ ಉಳಿದಿದ್ದೆವು. ತರಬೇತಿಗೆ ಮರಳಿದ್ದು ಖುಷಿಯ ಸಂಗತಿ‘ ಎಂದು ಮಾರ್ಕ್ವೆಜ್‌ ಹೇಳಿದರು.

ಎಚ್‌ಎಫ್‌ಸಿಯ ವಿದೇಶಿ ಆಟಗಾರರಾದ ಜೋಯಲ್‌ ಚಿಯಾನೀಸ್‌, ಜೋವಾ ವಿಕ್ಟರ್‌, ಲೂಯಿಸ್‌ ಸಾಸ್ತ್ರೆ, ಒಡೆಯ್‌ ಒನಾಯಿಂದಿಯಾ, ಫ್ರಾನ್‌ ಸ್ಯಾಂಡಜಾ ಹಾಗೂ ಅರಿಡನ್‌ ಸಂತಾನ ತಂಡವನ್ನು ಸೇರಿಕೊಂಡರು.

ಐಎಸ್‌ಎಲ್‌ ಟೂರ್ನಿಯು ನವೆಂಬರ್‌–ಮಾರ್ಚ್‌ ಅವಧಿಯಲ್ಲಿ ಗೋವಾದ ವಿವಿಧ ತಾಣಗಳಲ್ಲಿ ನಿಗದಿಯಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು