ಭಾನುವಾರ, ಜನವರಿ 24, 2021
23 °C
ಐ–ಲೀಗ್ ಫುಟ್‌ಬಾಲ್ ಟೂರ್ನಿ: ಸುದೇವ ದೆಹಲಿ ಎಫ್‌ಸಿಗೆ ನಿರಾಸೆ

ಮೊಹಮ್ಮಡನ್ ಸ್ಪೋರ್ಟಿಂಗ್ ಶುಭಾರಂಭ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕೋಲ್ಕತ್ತ: ಅಲಿ ಫೈಜಲ್‌ ಅವರು ಪಂದ್ಯದ ದ್ವಿತೀಯಾರ್ಧದಲ್ಲಿ ಗಳಿಸಿದ ಗೋಲಿನ ಬಲದಿಂದ ಮೊಹಮ್ಮಡನ್ ಸ್ಪೋರ್ಟಿಂಗ್‌ ತಂಡವು ಐ–ಲೀಗ್ ಫುಟ್‌ಬಾಲ್ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಇಲ್ಲಿನ ಸಾಲ್ಟ್‌ಲೇಕ್ ಕ್ರೀಡಾಂಗಣದಲ್ಲಿ ನಡೆದ ಟೂರ್ನಿಯ ಮೊದಲ ಪಂದ್ಯದಲ್ಲಿ ಶನಿವಾರ ಮೊಹಮ್ಮಡನ್ 1–0ಯಿಂದ ಸುದೇವ ದೆಹಲಿ ಎಫ್‌ಸಿ ತಂಡವನ್ನು ಸೋಲಿಸಿತು.

ಪಂದ್ಯದ ಮೊದಲಾರ್ಧದಲ್ಲಿ ಉಭಯ ತಂಡಗಳು ಪರಸ್ಪರರ ಬಲವನ್ನು ಅರಿತುಕೊಳ್ಳಲು ಸಮಯ ವ್ಯಯಿಸಿದವು. ಐ ಲೀಗ್ ಟೂರ್ನಿಯಲ್ಲಿ ರಾಷ್ಟ್ರೀಯ ರಾಜಧಾನಿಯಿಂದ ಆಡಲಿಳಿದ ಮೊದಲ ತಂಡವಾಗಿ ಗುರುತಿಸಿಕೊಂಡಿರುವ ಸುದೇವ ಎಫ್‌ಸಿಗೆ ಏಳನೇ ನಿಮಿಷದಲ್ಲಿ ಗೋಲು ಗಳಿಸುವ ಅವಕಾಶವೊಂದಿತ್ತು. ಆದರೆ ಎದುರಾಳಿ ತಂಡದ ಗೋಲ್‌ಕೀಪರ್ ಸುಲಭವಾಗಿ ತಡೆದರು.

58ನೇ ನಿಮಿಷದಲ್ಲಿ ಗೋಲು ಗಳಿಸಿದ ಅಲಿ ಫೈಜಲ್‌ ಮೊಹಮ್ಮಡನ್‌ಗೆ ಮಹತ್ವದ ಮುನ್ನಡೆ ತಂದುಕೊಟ್ಟರು. ಸುದೇವ ಎಫ್‌ಸಿ ಡಿಫೆನ್ಸ್ ದೌರ್ಬಲ್ಯದ ಲಾಭ ಪಡೆದ ಅವರು ಗೋಲುಕೀಪರ್ ರಕ್ಷಿತ್ ದಾಗರ್ ಅವರನ್ನು ವಂಚಿಸಿ ಚೆಂಡನ್ನು ಗೋಲುಪೆಟ್ಟಿಗೆಗೆ ಸೇರಿಸಿದರು.

ಇದಾದ ಸುದೇವ ಎಫ್‌ಸಿ ಹೆಚ್ಚು ಆಕ್ರಮಣಕಾರಿ ಆಟವಾಡಿತು. ಆದರೆ ಅದರ ಎಲ್ಲ ಪ್ರಯತ್ನಗಳನ್ನು ಮೊಹಮ್ಮಡನ್ ಆಟಗಾರರು ವಿಫಲಗೊಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.