ಶುಕ್ರವಾರ, ಸೆಪ್ಟೆಂಬರ್ 17, 2021
29 °C
ಇಂಡಿಯನ್ ಸೂಪರ್ ಲೀಗ್: ಬೆಂಗಳೂರು ಎಫ್‌ಸಿಗೆ ಎರಡು ಡಬಲ್ ಹೆಡರ್ ಪಂದ್ಯಗಳು

ಐಎಸ್‌ಎಲ್‌ ಟೂರ್ನಿಗೆ ನ.19ರಂದು ಚಾಲನೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯ ಎಂಟನೇ ಆವೃತ್ತಿಯ ಪಂದ್ಯಗಳು ನವೆಂಬರ್ 19ರಂದು ಆರಂಭವಾಗಲಿವೆ. ಎಲ್ಲ ಪಂದ್ಯಗಳು ಗೋವಾದ ಮೂರು ಕ್ರಿಡಾಂಗಣಗಳಲ್ಲಿ ನಡೆಯಲಿವೆ. ಈ ಬಾರಿ ಇದೇ ಮೊದಲು ವಾರಾಂತ್ಯದಲ್ಲಿ ಡಬಲ್ ಹೆಡರ್ ನಡೆಯಲಿದೆ. ಎರಡನೇ ಪಂದ್ಯ ರಾತ್ರಿ 9.30ಕ್ಕೆ ನಡೆಯಲಿದೆ.

ಉದ್ಘಾಟನಾ ಪಂದ್ಯದಲ್ಲಿ ಎಟಿಕೆ ಮೋಹನ್ ಬಾಗನ್ ಮತ್ತು ಕೇರಳ ಬ್ಲಾಸ್ಟರ್ಸ್‌ ತಂಡಗಳು ಸೆಣಸಲಿದ್ದು ಮೊದಲ ಕೋಲ್ಕತ್ತ ಡರ್ಬಿ (ಎಸ್‌ಸಿ ಈಸ್ಟ್ ಬೆಂಗಾಲ್–ಎಟಿಕೆ ಮೋಹನ್ ಬಾಗನ್‌) ನವೆಂಬರ್ 27ರಂದು ವಾಸ್ಕೊದ ತಿಲಕ್ ಮೈದಾನ್ ಕ್ರೀಡಾಂಗಣದಲ್ಲಿ ನಡೆಯಲಿದೆ.

ಟೂರ್ನಿಯ ವೇಳಾಪಟ್ಟಿಯನ್ನು ಆಯೋಜಕರು ಸೋಮವಾರ ಬಿಡುಗಡೆ ಮಾಡಿದ್ದು ಹಾಲಿ ಚಾಂಪಿಯನ್ ಮುಂಬೈ ಸಿಟಿ ಎಫ್‌ಸಿ ತನ್ನ ಮೊದಲ ಪಂದ್ಯದಲ್ಲಿ ಆತಿಥೇಯ ಎಫ್‌ಸಿ ಗೋವಾವನ್ನು ಎದುರಿಸಲಿದೆ. ಈಸ್ಟ್ ಬೆಂಗಾಲ್‌ ಎಫ್‌ಸಿ ತನ್ನ ಮೊದಲ ಪಂದ್ಯವನ್ನು ನವೆಂಬರ್ 21ರಂದು ಜೆಮ್ಶೆಡ್‌ಪುರ ಎಫ್‌ಸಿ ಎದುರು ಆಡಲಿದೆ.

2021-22ರ ಋತುವಿನ ಲೀಗ್‌ನಲ್ಲಿ ಒಟ್ಟು 115 ಪಂದ್ಯಗಳು ಇರುತ್ತವೆ. ಈ ಪೈಕಿ ಮೊದಲ 11 ಸುತ್ತುಗಳ ವೇಳಾಪಟ್ಟಿಯನ್ನು ಮಾತ್ರ ಈಗ ಬಿಡುಗಡೆ ಮಾಡಲಾಗಿದೆ. ಇದು ಜನವರಿ ಒಂಬತ್ತರಂದು ಕೊನೆಗೊಳ್ಳಲಿದೆ. ಪ್ರತಿದಿನದ ಪಂದ್ಯಗಳು ಸಂಜೆ 7.30ಕ್ಕೆ ಆರಂಭವಾಗಲಿವೆ.

 

115: ಲೀಗ್ ಹಂತದ ಒಟ್ಟು ಪಂದ್ಯಗಳು

55: ಮೊದಲ ಹಂತದ ಪಂದ್ಯಗಳು

6: ಒಟ್ಟು ಡಬಲ್ ಹೆಡರ್‌ಗಳು

13: ನವೆಂಬರ್‌ನಲ್ಲಿ ನಡೆಯುವ ಪಂದ್ಯಗಳು

32: ಡಿಸೆಂಬರ್‌ನಲ್ಲಿ ನಡೆಯುವ ಪಂದ್ಯಗಳು

10; ಜನವರಿಯಲ್ಲಿ ನಡೆಯುವ ಪಂದ್ಯಗಳು

 

ಬೆಂಗಳೂರು ಎಫ್‌ಸಿ ತಂಡದ ಪಂದ್ಯಗಳು

ದಿನಾಂಕ;ಎದುರಾಳಿ;ಸ್ಥಳ;ಸಮಯ

ನ.20;ಎನ್‌ಇಯು;ಬ್ಯಾಂಬೊಲಿಮ್;7.30

ನ.24;ಒಎಫ್‌ಸಿ;ವಾಸ್ಕೊ;7.30

ನ.28;ಕೆಬಿಎಫ್‌ಸಿ;ಬ್ಯಾಂಬೊಲಿಮ್;7.30

ಡಿ.4;ಮುಂಬೈಬ್ಯಾಂಬೊಲಿಮ್;9.30

ಡಿ.8;ಎಚ್‌ಎಫ್‌ಸಿ;ಬ್ಯಾಂಬೊಲಿಮ್;7.30

ಡಿ.11;ಗೋವಾ;ಬ್ಯಾಂಬೊಲಿಮ್;9.30

ಡಿ.16;ಎಟಿಕೆಎಂಬಿ;ಬ್ಯಾಂಬೊಲಿಮ್;7.30

ಡಿ.20;ಜೆಎಫ್‌ಸಿ;ಬ್ಯಾಂಬೊಲಿಮ್;7.30

ಡಿ.30;ಸಿಎಫ್‌ಸಿ;ವಾಸ್ಕೊ;7.30

ಜ.4;ಎಸ್‌ಸಿಇಬಿ;ಬ್ಯಾಂಬೊಲಿಮ್;7.30

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.