ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಬೈ ಸಿಟಿ ಎಫ್‌ಸಿಗೆ ಲ್ಯಾಚೆನ್ಪಾ

Last Updated 23 ಅಕ್ಟೋಬರ್ 2020, 14:36 IST
ಅಕ್ಷರ ಗಾತ್ರ

ಮುಂಬೈ: ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಟೂರ್ನಿಯಲ್ಲಿ ಆಡುವ ಮುಂಬೈ ಸಿಟಿ ಫುಟ್‌ಬಾಲ್‌ ಕ್ಲಬ್‌ ಶುಕ್ರವಾರ ಯುವ ಗೋಲ್‌ಕೀಪರ್‌ ಪುರ್ಬಾ ಲ್ಯಾಚೆನ್ಪಾ ಅವರೊಂದಿಗೆ ಒಪ್ಪಂದ ಮಾಡಿಕೊಂಡಿದೆ.

22 ವರ್ಷದ ಲ್ಯಾಚೆನ್ಪಾ, 2024ರವರೆಗೆ ಫ್ರ್ಯಾಂಚೈಸ್‌ನೊಂದಿಗೆ ಇರಲು ಸಹಿ ಹಾಕಿದ್ದಾರೆ.

ಶಿಲ್ಲಾಂಗ್‌ ಲಾಜೊಂಗ್‌ ಎಫ್‌ಸಿ ಅಕಾಡೆಮಿಯಲ್ಲಿ ತರಬೇತಿ ಪಡೆದಿರುವ ಸಿಕ್ಕಿಂ ಮೂಲದ ಆಟಗಾರ, 2015ರಲ್ಲಿ ಇದೇ ಕ್ಲಬ್‌ ಮೂಲಕ ಪದಾರ್ಪಣೆ ಮಾಡಿದ್ದರು.

ಐ–ಲೀಗ್‌ ಟೂರ್ನಿಯಲ್ಲಿ ಶಿಲ್ಲಾಂಗ್ ಲಾಜೊಂಗ್‌ ಎಫ್‌ಸಿ ಪರ ನಾಲ್ಕು ಋತುಗಳಲ್ಲಿ, ಲ್ಯಾಚೆನ್ಪಾ 24 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದರು. 2019ರಲ್ಲಿ ರಿಯಲ್‌ ಕಾಶ್ಮೀರ್‌ ತಂಡ ಸೇರಿದ್ದರು.

ಕಳೆದ ಐ–ಲೀಗ್ ಟೂರ್ನಿಯಲ್ಲಿ ರಿಯಲ್‌ ಕಾಶ್ಮೀರ್ ತಂಡ ನಾಲ್ಕನೇ ಸ್ಥಾನ ಗಳಿಸಿತ್ತು. ಲ್ಯಾಚೆನ್ಪಾ ಉತ್ತಮ ಆಟವಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT