ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡ್ರಾ ಪಂದ್ಯದಲ್ಲಿನೆದರ್ಲೆಂಡ್ಸ್–ಈಕ್ವೆಡಾರ್

Last Updated 25 ನವೆಂಬರ್ 2022, 19:28 IST
ಅಕ್ಷರ ಗಾತ್ರ

ದೋಹಾ (ರಾಯಿಟರ್ಸ್): ನೆದರ್ಲೆಂಡ್ಸ್ ಮತ್ತು ಈಕ್ವೆಡಾರ್ ತಂಡಗಳ ನಡುವೆ ಇಲ್ಲಿ ನಡೆದ ಎ ಗುಂಪಿನ ಪಂದ್ಯವು 1–1ರಿಂದ ಡ್ರಾನಲ್ಲಿ ಅಂತ್ಯವಾಯಿತು.

ಇಲ್ಲಿನ ಖಲೀಫಾ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಜಿದ್ದಾಜಿದ್ದಿನ ಪೈಪೋಟಿ ಕಂಡುಬಂದ ಪಂದ್ಯದ ಆರನೇ ನಿಮಿಷದಲ್ಲಿ ಗೋಲು ದಾಖಲಿಸಿದ ನೆದರ್ಲೆಂಡ್ಸ್‌ನ ಕೋಡಿ ಗಾಕ್‌ಪೊ ಮುನ್ನಡೆ ತಂದುಕೊಟ್ಟರು. ಆದರೆ ಎನ್ನೆರ್ ವೆಲೆನ್ಸಿಯಾ 49ನೇ ನಿಮಿಷದಲ್ಲಿ ದಾಖಲಿಸಿದ ಗೋಲು ಈಕ್ವೆಡಾರ್‌ ಸಬಮಲ ಸಾಧಿಸಲು ಕಾರಣವಾಯಿತು. ಇದರೊಂದಿಗೆ ಈಕ್ವೆಡಾರ್ ಮತ್ತು ನೆದರ್ಲೆಂಡ್ಸ್ ತಂಡಗಳಿಗೆ 16ರ ಘಟ್ಟದ ಹಾದಿ ಮುಕ್ತವಾಗಿದೆ. ಉಭಯ ತಂಡಗಳು ತಲಾ ನಾಲ್ಕು ಪಾಯಿಂಟ್ಸ್ ಗಳಿಸಿವೆ.

33 ವರ್ಷದ ಎನ್ನೆರ್‌ ಅವರಿಗೆ ಈ ವಿಶ್ವಕಪ್‌ ಟೂರ್ನಿಯಲ್ಲಿ ಇದು ಮೂರನೇ ಗೋಲು. ಅವರು ಈ ಪಂದ್ಯದಲ್ಲಿ ಗಾಯಗೊಂಡರು.

ಕತಾರ್ ಎದುರಿನ ಪಂದ್ಯದಲ್ಲಿ ಅವರು 2 ಗೋಲು ಹೊಡೆದಿದ್ದರು. ಈ ಫಲಿತಾಂಶದೊಂದಿಗೆ ಕತಾರ್ 16ರ ಘಟ್ಟ ತಲುಪುವ ಕನಸು ಕಮರಿಹೋಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT