ಫುಟ್‌ಬಾಲ್‌ : ಶ್ರೀರಾಮಪುರ ವೆಟರನ್ಸ್‌ಗೆ ಪ್ರಶಸ್ತಿ

7

ಫುಟ್‌ಬಾಲ್‌ : ಶ್ರೀರಾಮಪುರ ವೆಟರನ್ಸ್‌ಗೆ ಪ್ರಶಸ್ತಿ

Published:
Updated:

ಬೆಂಗಳೂರು: ಶ್ರೀರಾಮಪುರ ವೆಟರನ್ಸ್‌ ತಂಡವು ಬುಧವಾರ ಕರ್ನಾಟಕ ರಾಜ್ಯ ಫುಟ್‌ಬಾಲ್ ಸಂಸ್ಥೆ (ಕೆಎಸ್‌ಎಫ್‌ಎ) ಆಶ್ರಯದಲ್ಲಿ ನಡೆದ ಫುಟ್‌ಬಾಲ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದುಕೊಂಡಿತು.

ಬೆಳಿಗ್ಗೆ ನಡೆದ ಫೈನಲ್‌ ಪಂದ್ಯದಲ್ಲಿ  ಶ್ರೀರಾಮಪುರ ತಂಡವು 1–0 ಗೋಲಿನಿಂದ ಮರ್ಫಿ ಟೌನ್‌ ತಂಡದ ಎದುರು ಜಯಿಸಿತು. ಶ್ರೀರಾಮಪುರ ತಂಡದ ಇರಿದಿಯಾರಾಜು ಅವರು 12ನೇ ನಿಮಿಷದಲ್ಲಿ ಗೋಲು ಗಳಿಸಿ, ತಂಡದ ಗೆಲುವಿಗೆ ಕಾರಣರಾದರು.

ಶ್ರೀರಾಮಪುರ ತಂಡದ ಇನಾಯತ್ ಉಲ್ಲಾ (ಫಾರ್ವರ್ಡ್), ಮರ್ಫಿ ಟೌನ್‌ನ ಶಿವಕುಮಾರ್ (ಗೋಲ್‌ಕೀಪರ್), ಗೌತಮಪುರ ತಂಡದ ರವಿಕುಮಾರ್ (ಮಿಡ್‌ಫೀಲ್ಡರ್), ಪೆರಿಯಾರ್ ನಗರದ ರಾಜ್ (ಡಿಫೆಂಡರ್) ಅವರಿಗೆ ಪ್ರಶಸ್ತಿ ನೀಡಲಾಯಿತು. ಜೀವನ್‌ ನಗರ ತಂಡದ ರಾಜಕುಮಾರ್ ಅವರಿಗೆ  ಉತ್ತಮ ಸೀನಿಯರ್ ಫಾರ್ವಡ್‌ ಆಟಗಾರ ಪ್ರಶಸ್ತಿ ನೀಡಿ ಗೌರವಿಸಲಾಯಿತು.

 

 

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !