ಬುಧವಾರ, ಜನವರಿ 27, 2021
22 °C
ಕೆಎಸ್‌ಎಫ್‌ಎ ಫುಟ್‌ಬಾಲ್‌ ಕಪ್ ಟೂರ್ನಿ

ಬ್ರೇವ್ಸ್, ರೆಬೆಲ್ಸ್‌ ಜಯಭೇರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಸೋನಾಲಿ ಸಾಳ್ವಿ (21ನೇ ನಿಮಿಷ) ಹಾಗೂ ಆದ್ಮಿಕಾ ಭೋಸ್ಲೆ (65ನೇ ನಿಮಿಷ) ಗಳಿಸಿದ ಗೋಲುಗಳ ಬಲದಿಂದ ರೆಬೆಲ್ಸ್ ಎಫ್‌ಸಿ ತಂಡವು ಕೆಎಸ್‌ಎಫ್‌ಎ ಎ ಡಿವಿಷನ್ ಮಹಿಳಾ ಫುಟ್‌ಬಾಲ್ ಟೂರ್ನಿಯಲ್ಲಿ ಸೋಮವಾರ ಮಾತೃ ಪ್ರತಿಷ್ಠಾನ ತಂಡವನ್ನು 2–0ಯಿಂದ ಸೋಲಿಸಿತು.

ಇನ್ನೊಂದು ಪಂದ್ಯದಲ್ಲಿ ಬೆಂಗಳೂರು ಬ್ರೇವ್ಸ್ ಎಫ್‌ಸಿ ತಂಡವು 1–0ಯಿಂದ ಇಂಡಿಯನ್ ಫುಟ್‌ಬಾಲ್ ಫ್ಯಾಕ್ಟರಿ ಎದುರು ಜಯಿಸಿತು. ವಿಜೇತ ತಂಡದ ವೆಲೆನ್ಸಿ 35ನೇ ನಿಮಿಷದಲ್ಲಿ ಕಾಲ್ಚಳಕ ತೋರಿದರು.

ಮಂಗಳವಾರ ನಡೆಯುವ ಪಂದ್ಯಗಳಲ್ಲಿ ಮಾತೃ ಪ್ರತಿಷ್ಠಾನ ಎಫ್‌ಸಿ–ಬೆಂಗಳೂರು ಬ್ರೇವ್ಸ್ ಎಫ್‌ಸಿ ಹಾಗೂ ಇಂಡಿಯನ್‌ ಫುಟ್‌ಬಾಲ್ ಫ್ಯಾಕ್ಟರಿ–ರೆಬೆಲ್ಸ್ ಎಫ್‌ಸಿ ಸೆಣಸಲಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.