ಶುಕ್ರವಾರ, ಆಗಸ್ಟ್ 19, 2022
27 °C

ಎಎಫ್‌ಸಿ ಟಾಸ್ಕ್‌ಫೋರ್ಸ್‌ಗೆ ಭಾರತದ ಗಿರಿಜಾಶಂಕರ್‌ ನೇಮಕ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಪುಣೆ: ಭಾರತದ ನಿವೃತ್ತ ಕರ್ನಲ್‌ ಡಾ.ಗಿರಿಜಾ ಶಂಕರ್‌ ಮುಂಗಲಿ ಅವರು ಏಷ್ಯಾ ಮತ್ತು ಆಸ್ಟ್ರೇಲಿಯಾದಲ್ಲಿ ಫುಟ್ಬಾಲ್ ಕ್ಲಬ್‌ಗಳನ್ನು ನಿಯಂತ್ರಿಸುವ ಏಷ್ಯನ್ ಫುಟ್‌ಬಾಲ್‌ ಕಾನ್ಫೆಡರೇಷನ್‌ನ‌(ಎಎಫ್‌ಸಿ) ಕಾರ್ಯಪಡೆ ಸದಸ್ಯರಾಗಿ ನೇಮಕಗೊಂಡಿದ್ದಾರೆ.

ಗಿರಿಜಾ ಶಂಕರ್‌ ಅವರು ಸದ್ಯ ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್‌ನ (ಎಐಎಫ್‌ಎಫ್‌) ಕ್ಲಬ್‌ ಪರವಾನಗಿ ಸಮಿತಿಯ ಮುಖ್ಯಸ್ಥರಾಗಿದ್ದಾರೆ. ಎಎಫ್‌ಸಿಗೆ ನೇಮಕಗೊಂಡಿರುವ ಏಳು ಮಂದಿಯಲ್ಲಿ ಅವರು ಭಾರತದ ಏಕೈಕ ಸದಸ್ಯರಾಗಿದ್ದಾರೆ.

‘ದೇಶದ ಗ್ರಾಮೀಣ ಪ್ರದೇಶದಿಂದ ಬರುವ ಯುವ ಪ್ರತಿಭೆಗಳಿಗೆ ಫುಟ್‌ಬಾಲ್‌ನಲ್ಲಿ ಬದುಕು ಕಂಡುಕೊಳ್ಳಲು ವೇದಿಕೆ ಕಲ್ಪಿಸಲು ಪ್ರಯತ್ನಿಸುತ್ತೇನೆ‘ ಎಂದು ಗಿರಿಜಾ ಶಂಕರ್ ಹೇಳಿದ್ದಾರೆ.

ಎಎಫ್‌ಸಿಯ ಪ್ರಧಾನ ಕಾರ್ಯದರ್ಶಿ ಡ್ಯಾಟೊ ವಿಂಡ್ಸರ್‌ ಜಾನ್‌ ಅವರು ಗಿರಿಜಾ ಶಂಕರ್ ಅವರ ನೇಮಕದ ಆದೇಶ ಹೊರಡಿಸಿದ್ದಾರೆ. 2023ರವರೆಗೆ ಅವರು ಈ ಹುದ್ದೆಯಲ್ಲಿ ಇರಲಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು