ರಷ್ಯಾ ಸಾಧನೆಗೆ ಪ್ರಶಂಸೆಯ ಮಳೆ

7
ಉಡುಗೊರೆ ಗೋಲು ನೀಡಿದ ಅಹಮ್ಮದ್ ಫಾತಿ

ರಷ್ಯಾ ಸಾಧನೆಗೆ ಪ್ರಶಂಸೆಯ ಮಳೆ

Published:
Updated:

ಮಾಸ್ಕೊ: ಟೀಕೆಗಳು ಮತ್ತು ಅಪಹಾಸ್ಯಕ್ಕೆ ತಕ್ಕ ಉತ್ತರ ನೀಡಿ ವಿಶ್ವಕಪ್‌ ಟೂರ್ನಿಯ ಮೊದಲ ಪಂದ್ಯದಲ್ಲಿ ಭರ್ಜರಿ ಜಯ ಗಳಿಸಿದ್ದ ಆತಿಥೇಯ ರಷ್ಯಾ ಎರಡನೇ ಪಂದ್ಯದಲ್ಲೂ ಗೆದ್ದು ಪ್ರಿ ಕ್ವಾರ್ಟರ್‌ ಫೈನಲ್‌ ಹಂತಕ್ಕೆ ಏರಿತು.

ಮಂಗಳವಾರ ರಾತ್ರಿ ನಡೆದ ಈಜಿಪ್ಟ್ ಎದುರಿನ  ಪಂದ್ಯದಲ್ಲಿ ರಷ್ಯಾ 3–1ರಿಂದ ಗೆದ್ದಿತು. ಸೋವಿಯತ್ ಒಕ್ಕೂಟದಿಂದ ಬೇರ್ಪಟ್ಟ ನಂತರ ಇದೇ ಮೊದಲ ಬಾರಿ ಈ ತಂಡ 16ರ ಘಟ್ಟ ಪ್ರವೇಶಿಸಿದೆ. ತಂಡದ ಈ ಸಾಧನೆಗೆ ಆಡಳಿತಗಾರರು ಮತ್ತು ಸ್ಥಳೀಯ ಮಾಧ್ಯಮಗಳಿಂದ ಪ್ರಶಂಸೆ ವ್ಯಕ್ತವಾಗಿದೆ.

ಪತ್ರಿಕೆಯೊಂದು ಇದು ಅಚ್ಚರಿಯ ಸಾಧನೆ, ನೀವು ಇದನ್ನು ನಂಬುತ್ತೀರಾ ಎಂದು ಕೇಳಿದ್ದು ‘ಈ ಸಾಧನೆಗಾಗಿ ನಾವು ಬಹಳ ವರ್ಷಗಳಿಂದ ಕಾಯುತ್ತಿದ್ದೆವು’ ಎಂದು ರಷ್ಯಾದ ಕ್ರೀಡಾ ಸಚಿವ ಪವೆಲ್‌ ಕೊಲೊಬೊಕೊವ್‌ ಹೇಳಿದ್ದಾರೆ.

ಅಹಮ್ಮದ್ ಫಾತಿ ನೀಡಿದ ಉಡುಗೊರೆ ಗೋಲಿನೊಂದಿಗೆ ಖಾತೆ ತೆರೆದ ರಷ್ಯಾಗೆ ಮೊದಲ ಪಂದ್ಯದಲ್ಲಿ ಎರಡು ಗೋಲು ಗಳಿಸಿ ಮಿಂಚಿದ್ದ ಡೆನಿಸ್ ಚೆರಿಷೆವ್‌ 59ನೇ ನಿಮಿಷದಲ್ಲಿ 2–0 ಮುನ್ನಡೆ ಗಳಿಸಿಕೊಟ್ಟರು. ಆರ್ಟೆಮ್ ಜ್ಯೂಬಾ 62ನೇ ನಿಮಿಷದಲ್ಲಿ ತಂಡದ ಮುನ್ನಡೆಯನ್ನು 3–0ಗೆ ಏರಿಸಿದರು. ಮೊದಲಾರ್ಧದಲ್ಲಿ ನೈಜ ಸಾಮರ್ಥ್ಯ ತೋರಿಸಲಾಗದ ಮೊಹಮ್ಮದ್‌ ಸಲಾ 73ನೇ ನಿಮಿಷದಲ್ಲಿ ಈಜಿಪ್ಟ್‌ಗೆ ಸಮಾಧಾನಕರ ಗೋಲು ತಂದುಕೊಟ್ಟರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !