ಬುಧವಾರ, ಅಕ್ಟೋಬರ್ 23, 2019
20 °C

ಸ್ಯಾಫ್‌ 18 ವರ್ಷದೊಳಗಿನವರ ಚಾಂಪಿಯನ್‌ಷಿಪ್‌: ಭಾರತಕ್ಕೆ ಬಾಂಗ್ಲಾ ಸವಾಲು

Published:
Updated:

ಕಠ್ಮಂಡು, ನೇಪಾಳ: ಆತ್ಮವಿಶ್ವಾಸದ ಅಲೆಯಲ್ಲಿ ತೇಲುತ್ತಿರುವ ಭಾರತ 18 ವರ್ಷದೊಳಗಿನವರ ಫುಟ್‌ಬಾಲ್‌ ತಂಡ ಸ್ಯಾಫ್‌ ಚಾಂಪಿಯನ್‌ಷಿಪ್‌ನ ತನ್ನ ಮೊದಲ ಪಂದ್ಯದಲ್ಲಿ ಸೋಮವಾರ ಬಾಂಗ್ಲಾದೇಶ ಸವಾಲಿಗೆ ಸಜ್ಜಾಗಿದೆ. 

‘ತಾನಾಡಿದ ಮೊದಲ ಪಂದ್ಯದಲ್ಲಿ ಬಾಂಗ್ಲಾ ತಂಡವು ಶ್ರೀಲಂಕಾವನ್ನು 3–0ಯಿಂದ ಮಣಿಸಿದೆ. ಹಾಗಾಗಿ ಆ ತಂಡದ ಎದುರು ಮೈಮರೆಯುವಂತಿಲ್ಲ’ ಎಂದು ಭಾರತ 19 ವರ್ಷದೊಳಗಿನವರ ಫುಟ್‌ಬಾಲ್‌ ತಂಡದ ಕೋಚ್‌ ಫ್ಲಾಯ್ಡ್‌ ಪಿಂಟೊ ಹೇಳಿದ್ದಾರೆ. 

‘ಸವಾಲಿಗೆ ನಾವು ಸಜ್ಜಾಗಿದ್ದೇವೆ. ಆಟದ ತೀವ್ರತೆಯ ಕಡೆ ಗಮನ ನೀಡಬೇಕು. ಈ ಹಿಂದೆ ತೋರಿದ ಉತ್ತಮ ಆಟವನ್ನು ಮುಂದುವರಿಸಬೇಕು’ ಎಂದೂ ಅವರು ನುಡಿದರು.

‘ 19 ವರ್ಷದೊಳಗಿನವರ ಎಎಫ್‌ಸಿ ಕ್ವಾಲಿಫೈಯರ್ಸ್‌ ಟೂರ್ನಿಗೆ ನಾವು ಸಜ್ಜಾಗಬೇಕಿದೆ. ಈ ಸಮಯದಲ್ಲಿ ತಂಡದ ಶಕ್ತಿ ಮತ್ತು ದೌರ್ಬಲ್ಯಗಳನ್ನು ಅರಿಯಲು ಸ್ಯಾಫ್‌ ಚಾಂಪಿಯನ್‌ಷಿಪ್‌ ಉತ್ತಮ ಅವಕಾಶವಾಗಿದೆ’ ಎಂದು ತಂಡದ ಸಹಾಯಕ ಕೋಚ್‌ ಮಹೇಶ್‌ ಗಾವ್ಳಿ ಅಭಿಪ್ರಾಯಪಟ್ಟರು.

‘ತಂಡದಲ್ಲಿ ನಾಯಕತ್ವದ ಕೊರತೆಯಿಲ್ಲ. ಒತ್ತಡದಲ್ಲೂ ತಂಡವನ್ನು ಮುನ್ನಡೆಸುವ ಹಲವು ಆಟಗಾರರಿದ್ದಾರೆ. ನಾವು ಇಲ್ಲಿ ಗೆಲುವು ಸಾಧಿಸಲಿದ್ದೇವೆ’ ಎಂದು ತಂಡದ ಗೋಲ್‌ಕೀಪರ್‌ ಪ್ರಭಶುಕನ್‌ ಗಿಲ್‌ ಹೇಳಿದರು.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)