ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫುಟ್‌ಬಾಲ್‌: ನರೇಂದರ್‌, ಮಂದಾರ್‌ ದೇಸಾಯಿಗೆ ಸ್ಥಾನ

ಇಂಟರ್‌ಕಾಂಟಿನೆಂಟಲ್‌ ಕಪ್‌ ಟೂರ್ನಿಗೆ ಭಾರತ ಫುಟ್‌ಬಾಲ್‌ ತಂಡದ 25 ಸಂಭಾವ್ಯ ಆಟಗಾರರ ಆಯ್ಕೆ
Last Updated 5 ಜುಲೈ 2019, 20:01 IST
ಅಕ್ಷರ ಗಾತ್ರ

ನವದೆಹಲಿ: ಇಂಟರ್‌ಕಾಂಟಿನೆಂಟಲ್‌ ಕಪ್‌ ಟೂರ್ನಿಗೆ ಭಾರತ ಫುಟ್‌ಬಾಲ್‌ ತಂಡದ 25 ಸಂಭಾವ್ಯ ಆಟಗಾರರ ಪಟ್ಟಿಯನ್ನು ಶುಕ್ರವಾರ ಬಿಡುಗಡೆ ಮಾಡಲಾಗಿದೆ. ಡಿಫೆಂಡರ್‌ ನರೇಂದರ್‌ ಗೆಹ್ಲೋಟ್‌ ಹಾಗೂ ಮಿಡ್‌ಫೀಲ್ಡರ್‌ ಮಂದಾರ್‌ ರಾವ್‌ ದೇಸಾಯಿ ಅವಕಾಶ ಪಡೆದಿದ್ದು, ಅಹಮದಾಬಾದ್‌ನಲ್ಲಿ ಜುಲೈ 7ರಂದು ಟೂರ್ನಿ ಆರಂಭವಾಗಲಿದೆ.

ಹಾಲಿ ಚಾಂಪಿಯನ್‌ ಭಾರತ ತಂಡವು ತಜಕಿಸ್ತಾನ ವಿರುದ್ಧ ಉದ್ಘಾಟನಾ ಪಂದ್ಯವಾಡಲಿದೆ. ಸಿರಿಯಾ ಹಾಗೂ ಕೊರಿಯಾ ಟೂರ್ನಿಯಲ್ಲಿ ಭಾಗವಹಿಸುತ್ತಿರುವ ಇತರ ತಂಡಗಳು. ಪ್ರತಿ ತಂಡವು ಇತರ ತಂಡದ ವಿರುದ್ಧ ಒಂದೊಂದು ಪಂದ್ಯವಾಡಲಿದ್ದು, ಅಗ್ರಸ್ಥಾನ ಪಡೆದ ಎರಡು ತಂಡಗಳು ಫೈನಲ್‌ ತಲುಪಲಿವೆ.

‘ಮುಂಬೈನಲ್ಲಿ ನಡೆದ ಪೂರ್ವಸಿದ್ಧತಾ ಶಿಬಿರದಲ್ಲಿ ಎಲ್ಲ ಆಟಗಾರರು ಕಠಿಣ ಪರಿಶ್ರಮ ನಡೆಸಿದ್ದಾರೆ. ಮುಂಬರುವ ಪಂದ್ಯಗಳನ್ನು ಆಡಲು ಉತ್ಸಾಹಿತರಾಗಿದ್ದೇವೆ’ ಎಂದು ಕೋಚ್‌ ಇಗೊರ್‌ ಸ್ಟಿಮ್ಯಾಚ್‌ ಹೇಳಿದರು.

ಗುಜರಾತ್‌ ಮೊದಲ ಬಾರಿಗೆ ಅಂತರ್‌ರಾಷ್ಟ್ರೀಯ ಫುಟ್‌ಬಾಲ್‌ ಟೂರ್ನಿಯನ್ನು ಆಯೋಜಿಸುತ್ತಿದೆ.

2022ರ ಫಿಫಾ ವಿಶ್ವಕಪ್‌ ಅರ್ಹತಾ ಟೂರ್ನಿಯು ಸೆಪ್ಟೆಂಬರ್‌ನಲ್ಲಿ ನಡೆಯಲಿದ್ದು, ಈ ತಿಂಗಳ ಬಳಿಕ ಟೂರ್ನಿಯ ಡ್ರಾ ನಡೆಯಲಿದೆ. ಜೂನ್‌ 25ರಿಂದ ಮುಂಬೈನಲ್ಲಿ ನಡೆದ ಪೂರ್ವಸಿದ್ಧತಾ ಶಿಬಿರ ನಡೆದಿತ್ತು.ಇದರಲ್ಲಿ 35 ಆಟಗಾರರು ಭಾಗವಹಿಸಿದ್ದರು.

ಸಂಭಾವ್ಯ ಆಟಗಾರರು

ಗೋಲ್‌ಕೀಪರ್ಸ್: ಗುರ್‌ಪ್ರೀತ್‌ ಸಿಂಗ್‌ ಸಂಧು, ಅಮರಿಂದರ್‌ ಸಿಂಗ್‌, ಕಮಲ್‌ಜೀತ್‌ ಸಿಂಗ್‌.

ಡಿಫೆಂಡರ್ಸ್: ಪ್ರೀತಂ ಕೊಟಲ್‌, ರಾಹುಲ್‌ ಭೆಕೆ, ಸಂದೇಶ್‌ ಜಿಂಗಾನ್‌, ಆದಿಲ್‌ ಖಾನ್‌, ಅನಾಸ್‌ ಎಡತೊಡಿಕಾ, ನರೇಂದರ್‌ ಗೆಹ್ಲೋಟ್‌, ಸುಭಶಿಸ್‌ ಬೋಸ್‌, ಜೆರ್ರಿ ಲಾಲ್‌ರಿಂಜುವಾಲಾ.

ಮಿಡ್‌ಫೀಲ್ಡರ್ಸ್: ಉದಾಂತ್‌ ಸಿಂಗ್‌, ಬ್ರೆಂಡನ್‌ ಫೆರ್ನಾಂಡಿಸ್‌, ಅನಿರುದ್ಧ ಥಾಪಾ, ಪ್ರಣಯ್‌ ಹಲ್ದಾರ್‌, ರೌಲಿಂಗ್‌ ಬೊರ್ಗೆಸ್‌, ವಿನೀತ್‌ ರಾಜ್‌, ಸಾಹಲ್‌ ಅಬ್ದುಲ್‌, ಅಮರ್‌ಜೀತ್‌ ಸಿಂಗ್‌, ಲಲ್ಲಿಂಜುವಾಲಾ ಚಾಂಗ್ಟೆ, ಮಂದಾರ್‌ ರಾವ್‌ ದೇಸಾಯಿ.

ಫಾವಡ್ಸ್: ಜಾಬಿ ಜಸ್ಟಿನ್‌, ಸುನೀಲ್‌ ಚೆಟ್ರಿ, ಫಾರೂಕ್‌ ಚೌಧರಿ, ಮನ್‌ವೀರ್‌ ಸಿಂಗ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT