ಫುಟ್‌ಬಾಲ್‌: ಸನ್‌ರೈಸ್‌ ತಂಡಕ್ಕೆ ಪ್ರಶಸ್ತಿ

7
ಪೆನಾಲ್ಟಿ ಅವಕಾಶದಲ್ಲಿ ಗೋವನ್ಸ್‌ ಎಫ್‌ಸಿ ತಂಡಕ್ಕೆ ನಿರಾಸೆ

ಫುಟ್‌ಬಾಲ್‌: ಸನ್‌ರೈಸ್‌ ತಂಡಕ್ಕೆ ಪ್ರಶಸ್ತಿ

Published:
Updated:
‘ಸಿ’ ಡಿವಿಷನ್‌ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆದ್ದ ಸನ್‌ರೈಸ್‌ ಎಫ್‌ಸಿ ತಂಡದ ಆಟಗಾರರು ಟ್ರೋಫಿಯೊಂದಿಗೆ ಸಂಭ್ರಮಿಸಿದರು. (ನಿಂತವರು, ಎಡದಿಂದ) ಕಾರ್ತಿಕ್‌, ಆಕಾಶ್‌ ಪಾಲ್‌, ಅಭಿಷೇಕ್‌, ರಿಚರ್ಡ್‌, ರೋಷನ್‌, ನಿಕ್ಸನ್‌, ಅನುಪ್‌ ತೆರೇಸಾ (ಹಿರಿಯ ಕೋಚ್‌), ಕಿಶೋರ್‌ (ಕಾರ್ಯದರ್ಶಿ), ಕರುಣಾಕರನ್‌ (ತಂಡದ ತರಬೇತುದಾರ), ಆರ್‌. ಮೋಹನ್‌ (ವ್ಯವಸ್ಥಾಪಕ), ಶೆರ್ವಿನ್‌, ರಕ್ಷಿತ್‌, ಜೋಶುವಾ, ಡಿ. ಶೆರ್ವಿನ್‌ ಮತ್ತು ಶರತ್‌. (ಮಂಡಿಯೂರಿ ಕುಳಿತಿರುವವರು) ಡ್ರೈಡನ್‌, ಅರುಣ್‌, ಜೇಮ್ಸ್‌, ಕಾರ್ತಿಕ್‌, ಶಬರಿ, ಎಸ್‌. ಶ್ರೆವಿನ್‌, ಅಜಯ್‌, ರಾಘವ್‌, ಕಿರಣ್‌ ಮತ್ತು ಡೈಲಿನ್‌

ಬೆಂಗಳೂರು: ಪೆನಾಲ್ಟಿ ಅವಕಾಶದಲ್ಲಿ ಗೋಲು ಗಳಿಸಲು ಯಶಸ್ವಿಯಾದ ಸನ್‌ರೈಸ್‌ ಎಫ್‌ಸಿ ತಂಡವು ಬೆಂಗಳೂರು ಜಿಲ್ಲಾ ಫುಟ್‌ಬಾಲ್‌ ಸಂಸ್ಥೆ (ಬಿಡಿಎಫ್‌ಎ) ಆಶ್ರಯದ ‘ಸಿ’ ಡಿವಿಷನ್‌ ಲೀಗ್‌ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆದ್ದಿದೆ. 

ಅಶೋಕ ನಗರದಲ್ಲಿರುವ ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಫೈನಲ್‌ ಹಣಾಹಣಿಯಲ್ಲಿ ಸನ್‌ರೈಸ್‌ ಎಫ್‌ಸಿಯು ಪೆನಾಲ್ಟಿಯಲ್ಲಿ 4–3 ಗೋಲುಗಳಿಂದ ಗೋವನ್ಸ್‌ ಎಫ್‌ಸಿಯ ಸವಾಲು ಮೀರಿತು.

ಉಭಯ ತಂಡಗಳು ನಿಗದಿತ ಅವಧಿಯಲ್ಲಿ ತಲಾ ಮೂರು ಗೋಲುಗಳನ್ನು ದಾಖಲಿಸಿದ್ದವು. ಸನ್‌ರೈಸ್‌ ಪರ ಜೋಶುವಾ (5 ಮತ್ತು 10ನೇ ನಿಮಿಷ) ಎರಡು ಬಾರಿ ಚೆಂಡನ್ನು ಗುರಿ ಮುಟ್ಟಿಸಿದರು. 44ನೇ ನಿಮಿಷದಲ್ಲಿ ಗೋವನ್ಸ್‌ ತಂಡದ ಶೆರ್ವಿನ್‌ ತಮ್ಮದೇ ಗೋಲುಪೆಟ್ಟಿಗೆಯೊಳಗೆ ಚೆಂಡನ್ನು ಒದ್ದರು. ಹೀಗಾಗಿ ಸನ್‌ರೈಸ್‌ ಖಾತೆಗೆ ‘ಉಡುಗೊರೆ’ ರೂಪದಲ್ಲಿ ಮೂರನೇ ಗೋಲು ಸೇರ್ಪಡೆಯಾಯಿತು. ಗೋವನ್ಸ್‌ ತಂಡದ ಕ್ಲಿಂಟನ್‌ (7 ಮತ್ತು 21ನೇ ನಿ.) ಎರಡು ಹಾಗೂ ಸಚಿನ್‌ (61ನೇ ನಿ.) ಒಂದು ಗೊಲು ಬಾರಿಸಿದರು. ಆದರೆ, ಹೆಚ್ಚುವರಿ ಅವಧಿಯಲ್ಲಿ ಎರಡೂ ತಂಡಗಳು ಗೋಲು ಗಳಿಸಲು ವಿಫಲವಾದವು. ಹೀಗಾಗಿ ವಿಜೇತರನ್ನು ನಿರ್ಧರಿಸಲು ಪೆನಾಲ್ಟಿ ಮೊರೆ ಹೋಗಬೇಕಾಯಿತು. 

ಪೆನಾಲ್ಟಿ ಅವಕಾಶದಲ್ಲಿ ಡಿ. ಶೆರ್ವಿನ್‌, ರೋಷನ್‌, ರಕ್ಷಿತ್‌ ಹಾಗೂ ನಿಕ್ಸನ್‌ ಅವರು ಚೆಂಡನ್ನು ಗುರಿ ತಲುಪಿಸಿ ಸನ್‌ರೈಸ್‌ ಪಾಳಯದಲ್ಲಿ ಸಂಭ್ರಮ ಮೂಡಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !