ಬುಧವಾರ, ಆಗಸ್ಟ್ 10, 2022
23 °C
ಇಂಡಿಯನ್ ಸೂಪರ್ ಲೀಗ್‌ ಫುಟ್‌ಬಾಲ್ ಟೂರ್ನಿ

ಅಜೇಯ ಹೈದರಾಬಾದ್‌ಗೆ ಈಸ್ಟ್ ಬೆಂಗಾಲ್ ಸವಾಲು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಸ್ಕೊ: ಅಜೇಯ ಓಟ ಮುಂದುವರಿಸುವ ತವಕದಲ್ಲಿರುವ ಹೈದರಾಬಾದ್ ಎಫ್‌ಸಿ ತಂಡವು, ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯ ಪಂದ್ಯದಲ್ಲಿ ಮಂಗಳವಾರ ಎಸ್‌ಸಿ ಈಸ್ಟ್ ಬೆಂಗಾಲ್ ತಂಡವನ್ನು ಎದುರಿಸಲಿದೆ.

ಈ ಋತುವಿನಲ್ಲಿ ಇದುವರೆಗೆ ನಾಲ್ಕು ಪಂದ್ಯಗಳನ್ನು ಆಡಿರುವ ಹೈದರಾಬಾದ್ ತಂಡವು ಮೂರರಲ್ಲಿ ಡ್ರಾ ಸಾಧಿಸಿದ್ದರೆ, ಒಂದರಲ್ಲಿ ಮಾತ್ರ ಜಯದ ಸಿಹಿ ಸವಿದಿದೆ. ಐಎಸ್‌ಎಲ್ ಟೂರ್ನಿಯಲ್ಲಿ ಇದೇ ಮೊದಲ ಬಾರಿ ಆಡುತ್ತಿರುವ ಈಸ್ಟ್ ಬೆಂಗಾಲ್‌ ಎದುರು ಗೆಲುವಿನ ವಿಶ್ವಾಸವು ಆ ತಂಡಕ್ಕಿದೆ.

ಕೋಲ್ಕತ್ತ ಮೂಲದ ಈಸ್ಟ್ ಬೆಂಗಾಲ್‌ ಟೂರ್ನಿಯಲ್ಲಿ ಶುಭಾರಂಭ ಮಾಡುವಲ್ಲಿ ವಿಫಲವಾಗಿದೆ. ಈ ಹಿಂದಿನ ಪಂದ್ಯದಲ್ಲಿ ಜಮ್ಶೆಡ್‌ಪುರ ತಂಡದ ಎದುರು ಡ್ರಾ ಸಾಧಿಸುವ ಮೂಲಕ ಮೊದಲ ಪಾಯಿಂಟ್‌ ಕಲೆಹಾಕುವಲ್ಲಿ ಯಶಸ್ವಿಯಾಗಿದೆ. ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದರೂ ಹೈದರಾಬಾದ್ ತಂಡಕ್ಕೆ ಸವಾಲಾಗುವುದನ್ನು ಅಲ್ಲಗಳೆಯುವಂತಿಲ್ಲ.

ಮ್ಯಾಟಿ ಸ್ಟೆನ್‌ಮನ್‌, ಜಾಕ್ಸ್ ಮಗೋಮಾ, ಆಂಟನಿ ಪಿಲ್ಕಿಂಗ್ಟನ್‌ ಅವರು ಮಿಡ್‌ ಫೀಲ್ಡ್ ಹಾಗೂ ಆಕ್ರಮಣ ವಿಭಾಗದಲ್ಲಿ ಈಸ್ಟ್ ಬೆಂಗಾಲ್ ತಂಡಕ್ಕೆ ಶಕ್ತಿ ತುಂಬಬಲ್ಲರು. ಡಿಫೆನ್ಸ್ ವಿಭಾಗದಲ್ಲಿ ಶೆಹನಾಜ್ ಸಿಂಗ್ ಹಾಗೂ ಸ್ಕಾಟ್ ನೆವಿಲ್‌ ಅವರು ಎದುರಾಳಿ ತಂಡಕ್ಕೆ ತಡೆಗೋಡೆಯಾಗುವ ಸಾಧ್ಯತೆಯಿದೆ.

ಹೈದರಾಬಾದ್ ತಂಡಕ್ಕೆ ಯುವ ಆಟಗಾರರಾದ ಚಿಂಗ್ಲೆನ್ಸನಾ ಸಿಂಗ್‌, ಲಿಸ್ಟನ್‌ ಕೊಲ್ಯಾಸೊ, ಆಕಾಶ್‌ ಮಿಶ್ರಾ ಹಾಗೂ ಹಿತೇಶ್ ಶರ್ಮಾ ಅವರ ಸ್ಥಿರ ಆಟದ ಬಲವಿದೆ.

ಉಭಯ ತಂಡಗಳ ನಡುವೆ ಜಿದ್ದಾಜಿದ್ದಿನ ಪೈಪೋಟಿ ನಿರೀಕ್ಷಿಸಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು