ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಸೆನ್‌ ತಂಡ ಚಾಂಪಿಯನ್‌

ನೈಸ್‌ ಡಿಎಚ್‌ ಕಪ್‌ ಫುಟ್‌ಬಾಲ್‌ ಟೂರ್ನಿಗೆ ತೆರೆ
Last Updated 4 ಡಿಸೆಂಬರ್ 2022, 15:24 IST
ಅಕ್ಷರ ಗಾತ್ರ

ಬೆಂಗಳೂರು: ಸೊಗಸಾದ ಆಟವಾಡಿದ ವಿಸೆನ್‌ ತಂಡದವರು ಇಲ್ಲಿ ಕೊನೆಗೊಂಡ ‘ನೈಸ್‌ ಡಿಎಚ್‌ ಕಪ್‌ ಕಾರ್ಪೊರೇಟ್‌ ಫುಟ್‌ಬಾಲ್‌ ಟೂರ್ನಿ’ಯಲ್ಲಿ ಚಾಂಪಿಯನ್‌ ಆದರು.

ಭಾನುವಾರ ನಡೆದ ಫೈನಲ್‌ನಲ್ಲಿ ವಿಸೆನ್ 4-0 ಗೋಲುಗಳಿಂದ ಐಕ್ವಿಯಾ ವಿರುದ್ಧ ಗೆದ್ದಿತು. ಶೈಲೇಶ್‌ ತಿಲಗರ್‌ ಎರಡು ಗೋಲು ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಆಕಾಶ್‌ ಮಲಿ ಮತ್ತು ಸಿದ್ಧಾರ್ಥ್‌ ಮಾವಿಲ ತಲಾ ಒಂದು ಗೋಲು ತಂದಿತ್ತರು.

ಇದಕ್ಕೂ ಮುನ್ನ ನಡೆದ ಸೆಮಿಫೈನಲ್‌ ಪಂದ್ಯಗಳಲ್ಲಿ ವಿಸೆನ್‌ 11–0 ರಲ್ಲಿ ಟೈಟನ್‌ ತಂಡವನ್ನು ಮಣಿಸಿದ್ದರೆ, ಐಕ್ವಿಯಾ 3–1 ರಲ್ಲಿ ಸ್ವಿಸ್‌ ರೇ ವಿರುದ್ಧ ಗೆದ್ದಿತ್ತು.

ವೈಯಕ್ತಿಕ ಪ್ರಶಸ್ತಿ: ಟೂರ್ನಿಯಲ್ಲಿ ಒಟ್ಟು 18 ಗೋಲುಗಳನ್ನು ಗಳಿಸಿದ ವಿಸೆನ್‌ ತಂಡದ ಆಕಾಶ್‌ ಮಲಿ ’ಗರಿಷ್ಠ ಗೋಲ್‌ ಸ್ಕೋರರ್’ ಪ್ರಶಸ್ತಿ ಪಡೆದರು. ಐಕ್ವಿಯಾ ತಂಡದ ಕೆ.ಶರತ್‌, ‘ಅತ್ಯುತ್ತಮ ಗೋಲ್‌ಕೀಪರ್‌’, ಸ್ವಿಸ್‌ ರೇ ತಂಡದ ಶರಣ್ ದೀಪಕ್‌ ‘ಜಂಟ್ಲ್‌ಮನ್‌ ಆಫ್‌ ದಿ ಟೂರ್ನಮೆಂಟ್‌’ ಗೌರವ ತಮ್ಮದಾಗಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT