ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐ–ಲೀಗ್‌ನಲ್ಲಿ ಶೀಘ್ರದಲ್ಲೇ ಮಹಿಳಾ ರೆಫರಿಗಳು

ಎಐಎಫ್‌ಎಫ್‌ ರೆಫರಿಗಳ ಸಮಿತಿಯ ಮುಖ್ಯಸ್ಥ ರವಿಶಂಕರ್ ಅಭಿಮತ: ಶೀಘ್ರದಲ್ಲೇ ಅನುಷ್ಠಾನ
Last Updated 14 ನವೆಂಬರ್ 2020, 14:53 IST
ಅಕ್ಷರ ಗಾತ್ರ

ನವದೆಹಲಿ: ಭಾರತದ ಮಹಿಳಾ ರೆಫರಿಗಳು ಈಚಿನ ದಿನಗಳಲ್ಲಿ ನೈಪುಣ್ಯ ಅಭಿವೃದ್ಧಿಪಿಡಿಸಿಕೊಂಡಿದ್ದಾರೆ. ಹೀಗಾಗಿ ಶೀಘ್ರದಲ್ಲೇ ಐ–ಲೀಗ್ ಫುಟ್‌ಬಾಲ್ ಟೂರ್ನಿಯಲ್ಲಿ ಕಾರ್ಯನಿರ್ವಹಿಸುವ ಸಾಧ್ಯತೆ ಇದೆ ಎಂದು ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್‌ನ (ಎಐಎಫ್ಎಫ್‌) ರೆಫರಿಗಳ ನಿರ್ದೇಶಕ ಜೆ.ರವಿಶಂಕರ್ ಅಭಿಪ್ರಾಯಪಟ್ಟಿದ್ದಾರೆ.

ಪುರುಷ ರೆಫರಿಗಳು ಆಗಾಗ ಫಿಟ್‌ನೆಸ್ ಟೆಸ್ಟ್‌ಗಳಿಗೆ ಒಳಗಾಗುತ್ತಾರೆ. ಈಗ ಮಹಿಳಾ ರೆಫರಿಗಳನ್ನೂ ಈ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಇದು, ಅವರನ್ನು ಮಹತ್ವದ ಟೂರ್ನಿಗೆ ಸಜ್ಜುಗೊಳಿಸುವುದರ ಮೊದಲ ಹೆಜ್ಜೆ ಎಂದು ಅವರು ಎಐಎಫ್‌ಎಫ್‌ ಟಿವಿಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.

‘ರೆಫರಿಯಾಗಿ ಕಾರ್ಯನಿರ್ವಹಿಸುವುದು ಸುಲಭದ ಕೆಲಸವಲ್ಲ. ದೈಹಿಕವಾಗಿ ಎಷ್ಟು ಸಮರ್ಥರಾಗಿರುತ್ತಾರೆಯೋ ಮಾನಸಿಕವಾಗಿಯೂ ಅಷ್ಟೇ ಸಮರ್ಥರಾಗಿದ್ದರೆ ಮಾತ್ರ ಸರಿಯಾಗಿ ಪಂದ್ಯವನ್ನು ನಿಯಂತ್ರಿಸಲು ಸಾಧ್ಯ. ಈ ಸವಾಲನ್ನು ಸಮರ್ಥವಾಗಿ ನಿಭಾಯಿಸಲು ಮಹಿಳಾ ರೆಫರಿಗಳು ಸಜ್ಜಾಗಬೇಕು. ನಮ್ಮ ನಿರೀಕ್ಷೆಯನ್ನು ಅವರು ಹುಸಿಯಾಗಿಸಲಾರರು ಎಂಬ ನಿರೀಕ್ಷೆ ಇದೆ’ ಎಂದು ರವಿಶಂಕರ್‌ ಹೇಳಿದರು.

ಫಿಫಾದ ರೆಫರಿಗಳ ಸಮಿತಿಯಲ್ಲಿ ಭಾರತದ ಎಂಟು ಮಂದಿ ರೆಫರಿಗಳು ಮತ್ತು 10 ಮಂದಿ ಸಹಾಯಕ ರೆಫರಿಗಳು ಇದ್ದಾರೆ. ಇವರ ‍ಪೈಕಿ ರಂಜಿತಾ ದೇವಿ ಟೆಕ್ಕಮ್ ಮತ್ತು ಅನಿನಾ ಬರ್ಮನ್ ಅವರನ್ನು ಐ–ಲೀಗ್‌ ರೆಫರಿಗಳಾಗಿಯೂ ರಾಲ್ಯಾಂಗ್‌ ಧರ್‌ ಮತ್ತು ಉವೇನಾ ಫರ್ನಾಂಡಸ್ ಅವರನ್ನು ಸಹಾಯಕ ರೆಫರಿಗಳಾಗಿ ಆಯ್ಕೆ ಮಾಡಲಾಗಿದೆ. ಉವೇನಾ 2014ರಿಂದ ಪಟ್ಟಿಯಲ್ಲಿದ್ದು ರಾಲ್ಯಾಂಗ್ ಮತ್ತು ರಂಜಿತಾ ದೇವಿ ಅವರ ಮೇಲೆ 2018ರಿಂದ ಗಮನ ಇರಿಸಲಾಗಿದೆ. ಅನಿಕಾ ಬರ್ಮನ್ ಅವರು ಈ ವರ್ಷವಷ್ಟೇ ಎಲೈಟ್ ಪಟ್ಟಿಯಲ್ಲಿ ಸೇರಿದ್ದಾರೆ.

ಉವೇನಾ ಈಗಾಗಲೇ 17 ವರ್ಷದೊಳಗಿನ ಬಾಲಕಿಯರ ವಿಶ್ವಕಪ್‌ನಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದು ಉಳಿದ ಮೂವರು ಮುಂಬರುವ 17 ವರ್ಷದೊಳಗಿನ ಬಾಲಕಿಯರ ವಿಶ್ವಕಪ್‌ನಲ್ಲಿ ಕಾರ್ಯನಿರ್ವಹಿಸುವ ಅವಕಾಶ ಪಡೆದುಕೊಳ್ಳಲಿದ್ದಾರೆ. ಈ ಟೂರ್ನಿಗೆ ಭಾರತ ಆತಿಥ್ಯ ವಹಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT