ಮಾಂಡಾಲಯ್, ಮ್ಯಾನ್ಮರ್: ಮೊದಲ ಪಂದ್ಯದಲ್ಲಿ ಗೆದ್ದು ವಿಶ್ವಾಸದಿಂದ ಬೀಗುತ್ತಿರುವ ಭಾರತ ತಂಡಕ್ಕೆ ಈಗ ಅಗ್ನಿ ಪರೀಕ್ಷೆ ಎದುರಾಗಿದೆ.

ಒಲಿಂಪಿಕ್ ಕ್ವಾಲಿಫೈಯರ್ ರೌಂಡ್–2 ಟೂರ್ನಿಯ ತನ್ನ ಎರಡನೇ ಪಂದ್ಯದಲ್ಲಿ ಭಾರತ, ಬಲಿಷ್ಠ ನೇಪಾಳದ ಸವಾಲು ಎದುರಿಸಲಿದೆ.

ರೌಂಡ್–3ಕ್ಕೆ ಅರ್ಹತೆ ಗಳಿಸುವತ್ತ ಚಿತ್ತ ನೆಟ್ಟಿರುವ ಭಾರತ, ಆರಂಭಿಕ ಹಣಾಹಣಿಯಲ್ಲಿ 2–0 ಗೋಲುಗಳಿಂದ ಇಂಡೊನೇಷ್ಯಾವನ್ನು ಮಣಿಸಿತ್ತು. ಹಿಂದಿನ ಈ ಗೆಲುವು ಆಟಗಾರ್ತಿಯರ ಮನೋಬಲ ಹೆಚ್ಚುವಂತೆ ಮಾಡಿದೆ.

ಭಾರತ ಮತ್ತು ನೇಪಾಳ ಈ ವರ್ಷ ಎರಡು ಸಲ ಎದುರಾಗಿವೆ. ಭುವನೇಶ್ವರದಲ್ಲಿ ನಡೆದಿದ್ದ ಹೀರೊ ಗೋಲ್ಡ್ ಕಪ್ನಲ್ಲಿ ನೇಪಾಳ 2–1 ಗೋಲುಗಳಿಂದ ಗೆದ್ದಿತ್ತು. ಇತ್ತೀಚೆಗೆ ನಡೆದಿದ್ದ ಸ್ಯಾಫ್ ಚಾಂಪಿಯನ್ಷಿಪ್ನ ಫೈನಲ್ನಲ್ಲಿ ಭಾರತ 3–1 ಗೋಲುಗಳಿಂದ ಎದುರಾಳಿಗಳನ್ನು ಮಣಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.