ಭಾರತಕ್ಕೆ ಗೆಲುವಿನ ಕನಸು

ಶುಕ್ರವಾರ, ಏಪ್ರಿಲ್ 19, 2019
22 °C
ಮಹಿಳಾ ಫುಟ್‌ಬಾಲ್‌: ಇಂದು ಇಂಡೊನೇಷ್ಯಾ ಎದುರು ಸೆಣಸು

ಭಾರತಕ್ಕೆ ಗೆಲುವಿನ ಕನಸು

Published:
Updated:

ಮಂದಾಲಯ್‌, ಮ್ಯಾನ್ಮರ್‌ (ಪಿಟಿಐ): ಭಾರತ ಮಹಿಳಾ ಫುಟ್‌ಬಾಲ್‌ ತಂಡದವರು ಎಎಫ್‌ಸಿ ಒಲಿಂಪಿಕ್‌ ಕ್ವಾಲಿಫೈಯರ್‌ ರೌಂಡ್‌–2 ಟೂರ್ನಿಯಲ್ಲಿ ಶುಭಾರಂಭ ಮಾಡುವ ನಿರೀಕ್ಷೆಯಲ್ಲಿದ್ದಾರೆ.

ಬುಧವಾರ ನಡೆಯುವ ಹೋರಾಟದಲ್ಲಿ ಆಶಾಲತಾ ದೇವಿ ನೇತೃತ್ವದ ಭಾರತ ತಂಡವು ಇಂಡೊನೇಷ್ಯಾ ಎದುರು ಸೆಣಸಲಿದೆ.

ಭಾರತ ತಂಡದವರು ಜನವರಿಯಲ್ಲಿ ಜಕಾರ್ತದಲ್ಲಿ ನಡೆದಿದ್ದ ಇಂಡೊನೇಷ್ಯಾ ಎದುರಿನ ಎರಡು ಅಂತರರಾಷ್ಟ್ರೀಯ ಸೌಹಾರ್ದ ಪಂದ್ಯಗಳಲ್ಲಿ ಕ್ರಮವಾಗಿ 3–0 ಮತ್ತು 2–0 ಗೋಲುಗಳಿಂದ ಜಯಿಸಿದ್ದರು. ಹಿಂದಿನ ಈ ಗೆಲುವುಗಳು ಆಶಾಲತಾ ಪಡೆಯ ಆಟಗಾರ್ತಿಯರ ವಿಶ್ವಾಸ ಇಮ್ಮಡಿಸುವಂತೆ ಮಾಡಿದೆ.

‘ಒಲಿಂಪಿಕ್‌ ಕ್ವಾಲಿಫೈಯರ್‌ ರೌಂಡ್‌–2 ಟೂರ್ನಿಯಲ್ಲಿ ಶುಭಾರಂಭ ಮಾಡಬೇಕೆಂಬುದು ಎಲ್ಲಾ ತಂಡಗಳ ಕನಸಾಗಿರುತ್ತದೆ. ನಮ್ಮ ತಂಡವೂ ಇದೇ ಗುರಿಯೊಂದಿಗೆ ಕಣಕ್ಕಿಳಿಯಲಿದೆ. ಇಂಡೊನೇಷ್ಯಾ ಎದುರು ಈ ವರ್ಷದ ಆರಂಭದಲ್ಲಿ ಆಡಿದ್ದ ಎರಡು ಪಂದ್ಯಗಳಲ್ಲೂ ನಾವು ಗೆದ್ದಿದ್ದೇವೆ. ಆ ತಂಡದ ಸಾಮರ್ಥ್ಯ ಏನು ಎಂಬುದು ನಮ್ಮ ಅರಿವಿಗೆ ಬಂದಿದೆ’ ಎಂದು ಭಾರತ ತಂಡದ ಮುಖ್ಯ ಕೋಚ್‌ ಮೆಮೋಲ್‌ ರಾಕಿ ತಿಳಿಸಿದ್ದಾರೆ.

‘ರೌಂಡ್‌–3ಗೆ ಅರ್ಹತೆ ಗಳಿಸುವುದು ನಮ್ಮ ಗುರಿ. ಹೀಗಾಗಿ ಎಲ್ಲಾ ಪಂದ್ಯಗಳಲ್ಲೂ ಗೆಲುವಿಗಾಗಿ ಶಕ್ತಿ ಮೀರಿ ಪ್ರಯತ್ನಿಸುತ್ತೇವೆ. ಯಾವ ತಂಡವನ್ನೂ ಹಗುರವಾಗಿ ಪರಿಗಣಿಸುವುದಿಲ್ಲ’ ಎಂದು ನಾಯಕಿ ಆಶಾಲತಾ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !