ಸೋಮವಾರ, ಆಗಸ್ಟ್ 19, 2019
28 °C

ತಪ್ಪುಗಳು ಮರುಕಳಿಸಲು ಬಿಡುವುದಿಲ್ಲ: ಲಾಲ್‌ರೆಮ್ಸಿಯಾಮಿ

Published:
Updated:

ಬೆಂಗಳೂರು: ಏಷ್ಯನ್‌ ಗೇಮ್ಸ್ ಫೈನಲ್‌ ವೇಳೆ ಎಸಗಿದ ತಪ್ಪುಗಳು ಮರುಕಳಿಸಲು ಬಿಡುವುದಿಲ್ಲ. 2020ರ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವ ವಿಶ್ವಾಸವಿದೆ ಎಂದು ಭಾರತ ಮಹಿಳಾ ಹಾಕಿ ತಂಡದ ಆಟಗಾರ್ತಿ ಲಾಲ್‌ರೆಮ್ಸಿಯಾಮಿ ಹೇಳಿದ್ದಾರೆ.

ಹೋದ ವರ್ಷದ ಏಷ್ಯನ್‌ ಗೇಮ್ಸ್ ಫೈನಲ್‌ ಪಂದ್ಯದಲ್ಲಿ ಭಾರತ ತಂಡ ಜಪಾನ್‌ ಎದುರು 1–2ರಿಂದ ಮುಗ್ಗರಿಸಿತ್ತು. ಆ ಮೂಲಕ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವ ಅವಕಾಶವೊಂದನ್ನು ಕಳೆದುಕೊಂಡಿತ್ತು. 

‘ಏಷ್ಯನ್‌ ಗೇಮ್ಸ್‌ನಲ್ಲಿ ಉತ್ತಮವಾಗಿ ಆಡಿದರೂ ಫೈನಲ್‌ ಎಸಗಿದ ಪ್ರಮಾದಗಳಿಂದಾಗಿ ಸೋತೆವು. ಆದರೆ ಎಫ್‌ಐಎಚ್‌ ಸರಣಿಯಲ್ಲಿ ತಪ್ಪುಗಳನ್ನು ತಿದ್ದಿಕೊಂಡು ಆಡಿದ್ದರಿಂದ ಅದೇ ಜಪಾನ್‌ ತಂಡವನ್ನು ಸೋಲಿಸಿ ಪ್ರಶಸ್ತಿ ಎತ್ತಿ ಹಿಡಿದೆವು’ ಎಂದು ರೆಮ್ಸಿಯಾಮಿ ತಿಳಿಸಿದರು.

‘ಹಾಕಿ ಇಂಡಿಯಾದಿಂದ ಆಯೋಜಿಸಲಾಗುತ್ತಿರುವ ಶಿಬಿರಗಳು ನಮ್ಮ ಆಟವನ್ನು ಉತ್ತಮಪಡಿಸಿಕೊಳ್ಳಲು ನೆರವಾಗುತ್ತಿವೆ’ ಎಂದು ಮಿಜೊರಾಂ ಆಟಗಾರ್ತಿ ನುಡಿದರು.

Post Comments (+)