ಭಾನುವಾರ, ಏಪ್ರಿಲ್ 2, 2023
23 °C

ಮೋಟರ್‌ಸ್ಪೋರ್ಟ್ಸ್ ಸ್ಪರ್ಧಿ ಗೌತಮ್ ಕದಂ ನಿಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಗರದ ಅನುಭವಿ ಮೋಟರ್‌ಸ್ಪೋರ್ಟ್ಸ್ ಸ್ಪರ್ಧಿ ಗೌತಮ್ ಕದಂ (66) ಭಾನುವಾರ ನಿಧನರಾದರು. ಅವರು ಕ್ಯಾನ್ಸರ್‌ನಿಂದ ಬಳಲುತ್ತಿದ್ದರು.

1978–86ರ ಅವಧಿಯಲ್ಲಿ ಹಲವು ರ‍್ಯಾಲಿಗಳಲ್ಲಿ ಅವರು ಭಾಗವಹಿಸಿದ್ದರು. 1982ರಲ್ಲಿ ಕರ್ನಾಟಕ 1000 ರ‍್ಯಾಲಿ, ಚಾರ್‌ಮಿನಾರ್ ಚಾಲೆಂಜ್‌, ಕಾಫಿ 500 ರ‍್ಯಾಲಿಗಳಲ್ಲಿ ಜಯ ಸಾಧಿಸಿದ್ದರು.

1983ರಲ್ಲಿ ಯಮಹಾ 350 ಬೈಕ್‌ನೊಂದಿಗೆ ನಂದಿ ಹಿಲ್ಸ್ ರೇಸ್‌ನಲ್ಲಿ ದಾಖಲೆಯ 1 ತಾಸು 30 ನಿಮಿಷ 5 ಸೆಕೆಂಡುಗಳಲ್ಲಿ ಗುರಿ ತಲು‍ಪಿದ್ದರು. 

ವನ್ಯಜೀವಿ ಪ್ರೇಮಿಯಾಗಿದ್ದ ಅವರು 36 ಸಾವಿರಕ್ಕೂ ಅಧಿಕ ಮರಗಳನ್ನು ಬೆಳೆಸಿದ್ದರು. ಅಲ್ಲದೆ ಖಾಸಗಿ ವನ್ಯಜೀವಿ ಅಭಯಾರಣ್ಯವನ್ನು ನಿರ್ಮಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.