ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬ್ಯಾಡ್ಮಿಂಟನ್‌ ಟೂರ್ನಿ: ಆಕರ್ಷಿ ಕಶ್ಯಪ್‌ ಚಾಂಪಿಯನ್‌

Published 26 ಫೆಬ್ರುವರಿ 2024, 16:28 IST
Last Updated 26 ಫೆಬ್ರುವರಿ 2024, 16:28 IST
ಅಕ್ಷರ ಗಾತ್ರ

ನವದೆಹಲಿ: ಭಾರತದ ಆಕರ್ಷಿ ಕಶ್ಯಪ್‌ ಅವರು ಉಗಾಂಡಾ ಇಂಟರ್‌ ನ್ಯಾಷನಲ್ ಚಾಲೆಂಜ್ ಬ್ಯಾಡ್ಮಿಂಟನ್‌ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಪುರುಷರ ಸಿಂಗಲ್ಸ್‌ನಲ್ಲಿ ಭಾರತದ ರಘು ಮರಿಸ್ವಾರಿ ರನ್ನರ್ಸ್‌ ಅಪ್‌ ಸ್ಥಾನ ಪಡೆದರು.

ಸೋಮವಾರ ನಡೆದ ಫೈನಲ್‌ನಲ್ಲಿ ಆಕರ್ಷಿ ಅವರು 25-23, 21-18 ರಿಂದ ಸ್ವದೇಶದ ಶ್ರುತಿ ಮುಂಡಾದ ಅವರನ್ನು ಮಣಿಸಿದರು. ಪುರುಷರ ಸಿಂಗಲ್ಸ್‌ನ ಫೈನಲ್‌ನಲ್ಲಿ ರಘು ಅವರು 18–21, 14–21ರಿಂದ ವಿಯೆಟ್ನಾಂನ ಲೆ ಡಕ್ ಫಾಟ್ ಅವರಿಗೆ ಸೋತರು.

ಪುರುಷರ ಡಬಲ್ಸ್‌ನಲ್ಲಿ ಭಾರತದ ಅರ್ಜುನ್‌ ಎಂ.ಆರ್‌. ಮತ್ತು ಧ್ರುವ ಕಪಿಲಾ ಜೋಡಿಯು 21-14, 21-13ರಿಂದ ಅಮೆರಿಕದ ವಿನ್ಸನ್ ಚಿಯು ಮತ್ತು ಜೋಶುವಾ ಯುವಾನ್ ಅವರನ್ನು ಫೈನಲ್‌ನಲ್ಲಿ ಮಣಿಸಿ ಪ್ರಶಸ್ತಿ ಗೆದ್ದುಕೊಂಡಿತು. ಮಿಕ್ಸೆಡ್‌ ಡಬಲ್ಸ್ ವಿಭಾಗದಲ್ಲಿ ಭಾರತದ ಸತೀಶ್ ಕುಮಾರ್ ಕರುಣಾಕರನ್ ಮತ್ತು ಆದ್ಯಾ ವರಿಯತ್ ಜೋಡಿಯು ಚಾಂಪಿಯನ್‌ ಆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT