ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಫೆ.11ರಿಂದ ಗ್ವಾಲಿಯರ್‌ನಲ್ಲಿ ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಷಿಪ್

ವಯೋಮಿತಿ ಗುಂಪು ಘೋಷಿಸಿದ ಡಬ್ಲ್ಯುಎಫ್‌ಐ ತಾತ್ಕಾಲಿಕ ಸಮಿತಿ
Published 20 ಜನವರಿ 2024, 20:51 IST
Last Updated 20 ಜನವರಿ 2024, 20:51 IST
ಅಕ್ಷರ ಗಾತ್ರ

ನವದೆಹಲಿ: ಗ್ವಾಲಿಯರ್‌ನಲ್ಲಿ ಫೆಬ್ರುವರಿ 11 ರಿಂದ 17ರವರೆಗೆ 15 ವರ್ಷದೊಳಗಿನ ಮತ್ತು 20 ವರ್ಷದೊಳಗಿನ ರಾಷ್ಟ್ರೀಯ ಚಾಂಪಿಯನ್‌ಷಿಪ್‌ ಆಯೋಜಿಸಲಾಗುವುದು ಎಂದು ಭಾರತ ಕುಸ್ತಿ ಸಂಸ್ಥೆಯ (ಡಬ್ಲ್ಯುಎಫ್‌ಐ)  ತಾತ್ಕಾಲಿಕ ಸಮಿತಿ ಘೋಷಿಸಿದೆ. 

ಗ್ವಾಲಿಯರ್‌ನ ಶಕ್ತಿ ನಗರದ ಎಲ್‌ಎನ್‌ಯುಪಿಇ ಕ್ಯಾಂಪಸ್‌ನ ರೇಸ್‌ಕೋರ್ಸ್‌ ರಸ್ತೆಯಲ್ಲಿರುವ ಪ್ರತಿಷ್ಠಿತ  ಲಕ್ಷ್ಮಿಬಾಯಿ  ನ್ಯಾಷನಲ್ ಶಿಕ್ಷಣ ಸಂಸ್ಥೆಯಲ್ಲಿ ಈ ಕ್ರೀಡಾಕೂಟ ನಡೆಯಲಿದೆ. ಸುಮಾರು 1200 ಕುಸ್ತಿಪಟುಗಳು ಮತ್ತು 300 ಅಧಿಕಾರಿಗಳು ಕೂಟದಲ್ಲಿ ಭಾಗವಹಿಸಲಿದ್ದಾರೆ ಎಂದು ಸಮಿತಿ ಅಧ್ಯಕ್ಷ ಭೂಪೇಂದರ್‌ ಸಿಂಗ್ ಬಜ್ವಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ತಾತ್ಕಾಲಿಕ ಸಮಿತಿ ಮತ್ತು ಡಬ್ಲುಎಫ್‌ಐನ ಅಮಾನತುಗೊಂಡ ಆಡಳಿತ ಸಮಿತಿ  ಪ್ರತ್ಯೇಕ ರಾಷ್ಟ್ರೀಯ ಚಾಂಪಿಯನ್‌ಷಿಪ್‌ ಘೋಷಿಸುವುದರೊಂದಿಗೆ ಭಾರತೀಯ ಕುಸ್ತಿಯಲ್ಲಿ ಅಧಿಕಾರದ ಹೋರಾಟ ನಡೆಯುತ್ತಿದೆ.

ಡಬ್ಲ್ಯುಎಫ್ಐ ಅಧ್ಯಕ್ಷ ಸಂಜಯ್ ಸಿಂಗ್ ನೇತೃತ್ವದ ಆಡಳಿತ ಮಂಡಳಿ ಡಿಸೆಂಬರ್ ಕೊನೆ ವಾರದಲ್ಲಿ ಉತ್ತರ ಪ್ರದೇಶದ ಗೊಂಡಾದಲ್ಲಿ 20–23 ವಯೋಮಿತಿಯ ರಾಷ್ಟ್ರೀಯ ಚಾಂಪಿಯನ್‌ಷಿಪ್ ಆಯೋಜಿಸುವುದಾಗಿ ಘೋಷಿಸಿತ್ತು. ಆದರೆ, ಕ್ರೀಡಾ ಸಚಿವಾಲಯವು ಡಿ. 24ರಂದು ನೂತನ ಆಡಳಿತ ಮಂಡಳಿಯನ್ನು ಅಮಾನತುಗೊಳಿಸಿತು.

ಜನವರಿ 29 ರಿಂದ ಪುಣೆಯಲ್ಲಿ ಸೀನಿಯರ್ ಚಾಂಪಿಯನ್‌ಷಿಪ್ ಆಯೋಜಿಸುವುದಾಗಿ ಡಬ್ಲ್ಯುಎಫ್ಐ ಘೋಷಿಸಿದ್ದರೆ, ಫೆಬ್ರವರಿ 2-5 ರಿಂದ ಜೈಪುರದಲ್ಲಿ ಆಯೋಜಿಸುವುದಾಗಿ ತಾತ್ಕಾಲಿಕ ಸಮಿತಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT