ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಲಿಂಪಿಕ್ ಬಳಿಕ ರಾಷ್ಟ್ರೀಯ ಶಿಬಿರ ಸ್ಥಗಿತ: ಎಎಫ್‌ಐ

Published 3 ಡಿಸೆಂಬರ್ 2023, 16:26 IST
Last Updated 3 ಡಿಸೆಂಬರ್ 2023, 16:26 IST
ಅಕ್ಷರ ಗಾತ್ರ

ಅಮೃತಸರ: ಮಹತ್ವದ ಬೆಳವಣಿಗೆಯೊಂದರಲ್ಲಿ, ಪ್ಯಾರಿಸ್ ಒಲಿಂಪಿಕ್‌ ಕೂಟದ ಬಳಿಕ ಪ್ರಮುಖ ಅಥ್ಲೀಟ್ ಗಳಿಗೆ ರಾಷ್ಟ್ರೀಯ ಶಿಬಿರ ನಡೆಸುವುದನ್ನು ನಿಲ್ಲಿಸಲು ಭಾರತ ಅಥ್ಲೆಟಿಕ್ ಫೆಡರೇಷನ್ (ಎಎಫ್ಐ) ಭಾನುವಾರ ನಿರ್ಧರಿಸಿದೆ. ಆಟಗಾರರಿಗೆ ಪ್ರಾಯೋಜಕತ್ವ ನೀಡಲು ಸಾರ್ವಜನಿಕ ಮತ್ತು ಖಾಸಗಿ ಸಂಸ್ಥೆಗಳಿಗೆ ಮುಕ್ತ ಅವಕಾಶ ಕಲ್ಪಿಸಿದೆ.

‘ಮುಂದಿನ ವರ್ಷದಿಂದ ರಾಷ್ಟ್ರೀಯ ಸೀನಿಯರ್ ತರಬೇತಿ ಶಿಬಿರ ನಡೆಸುವುದನ್ನು ನಿಲ್ಲಿಸಲಾಗುವುದು ಎಂಬುದನ್ನು ಕ್ರೀಡಾ ಸಚಿವಾಲಯಕ್ಕೆ ತಿಳಿಸಿದ್ದೇವೆ. ಸಾಯ್ ಎನ್‌ಸಿಒಇ (ನ್ಯಾಷನಲ್ ಸೆಂಟರ್ ಆಫ್ ಎಕ್ಸಲೆನ್ಸ್) ಗಳಲ್ಲಿ ಉತ್ತಮ ಸೌಲಭ್ಯಗಳಿವೆ. ರಿಲಯನ್ಸ್‌, ಜೆಎಸ್‌ಡಬ್ಲ್ಯೂ , ಟಾಟಾ ಮತ್ತು ಇತರ ಖಾಸಗಿ ಸಂಸ್ಥೆಗಳು ಸಹ ಉತ್ತಮ ಸೌಲಭ್ಯ ಹೊಂದಿವೆ. ದೊಡ್ಡ ಮೊತ್ತ ಹೂಡಿಕೆ ಮಾಡಿ, ವಿದೇಶಿ ತರಬೇತದಾರರನ್ನು ನೇಮಿಸಿದ್ದಾರೆ. ಅವರು ಕ್ರೀಡಾಪಟುಗಳಿಗೆ ತರಬೇತಿ ನೀಡಬಹುದು’ ಎಂದು ಎಎಫ್‌ಐ ಅಧ್ಯಕ್ಷ ಆದಿಲ್ಲೆ ಸುಮರಿವಾಲಾ ತಿಳಿಸಿದರು. 

‘ಖಾಸಗಿ ಸಂಸ್ಥೆಗಳು ಮಾತ್ರವಲ್ಲದೇ ಆರ್ಮಿ ಸ್ಪೋರ್ಟ್ಸ್ ಇನ್‌ಸ್ಟಿಟ್ಯೂಟ್, ರೈಲ್ವೆ, ಏರ್ ಫೋರ್ಸ್, ನೌಕಪಡೆ, ಒಎನ್‌ಜಿಸಿ, ಇತರ ಸಾರ್ವಜನಿಕ ವಲಯದ ಸಂಸ್ಥೆಗಳು ಮತ್ತು ರಾಜ್ಯ ಸರ್ಕಾರಗಳು ಸಹ ತಮ್ಮ ಕ್ರೀಡಾಪಟುಗಳಿಗೆ ತರಬೇತಿ ನೀಡಬಹುದು’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT