ನವದೆಹಲಿ: ಝಾಗ್ರೆಬ್ ವಿಶ್ವ ಕುಸ್ತಿ ಚಾಂಪಿಯನ್ಷಿಪ್ನಲ್ಲಿ ತಮ್ಮ ತೂಕವನ್ನು ಕಾಪಾಡಿಕೊಳ್ಳಲು ವಿಫಲರಾದ ಅಮನ್ ಸೆಹ್ರಾವತ್ ಅವರು ತಮ್ಮ ಮೇಲೆ ಹೇರಿರುವ ಒಂದು ವರ್ಷದ ನಿಷೇಧವನ್ನು ಪುನರ್ಪರಿಶೀಲಿಸುವಂತೆ ಭಾರತ ಕುಸ್ತಿ ಫೆಡರೇಷನ್ಗೆ ಸೋಮವಾರ ಮನವಿ ಸಲ್ಲಿಸಿದ್ದಾರೆ.

ಸೆಪ್ಟೆಂಬರ್ನಲ್ಲಿ ನಡೆದ ಈ ಚಾಂಪಿಯನ್ಷಿಪ್ನ 57 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಿದ್ದ ಅಮನ್ ಅವರು ಸ್ಪರ್ಧೆಯ ದಿನ 1.7 ಕೆ.ಜಿ. ಹೆಚ್ಚು ತೂಗಿದ್ದರು. ಇದರಿಂದ ತಂಡ ಮುಜುಗರ ಅನುಭವಿಸಬೇಕಾಯಿತು. ಹೀಗಾಗಿ ಅವರ ಮತ್ತು ತಂಡದ ಮೂವರು ಕೋಚ್ಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿತ್ತು. ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಕಂಚು ಗೆದ್ದಿದ್ದ 22 ವರ್ಷ ವಯಸ್ಸಿನ ಅಮನ್ ವಿಶ್ವ ಕೂಟದಲ್ಲೂ ಪದಕದ ಭರವಸೆಯಾಗಿದ್ದರು.

ಹೋದ ಮಂಗಳವಾರ ಅವರ ವಿರುದ್ಧ ಸೆ. 23 ರಿಂದ ಆರಂಭವಾಗುವಂತೆ ಒಂದು ವರ್ಷದ ನಿಷೇಧ ಹೇರಲಾಗಿತ್ತು.

‘ನನ್ನಿಂದ ತಪ್ಪಾಗಿದೆ. ಇಂಥ ದೊಡ್ಡ ಚಾಂಪಿಯನ್ಷಿಪ್ನಲ್ಲಿ ತೂಕ ಕಾಪಾಡಿಕೊಳ್ಳಬೇಕಿತ್ತು’ ಎಂದು ಅವರು ಹೇಳಿದರು. ಕುಸ್ತಿ ಫೆಡರೇಷನ್ ಮುಖ್ಯಸ್ಥ ಸಂಜಯ್ ಸಿಂಗ್ ಅವರನ್ನು ಭೇಟಿ ಮಾಡಿ ನಿರ್ಧಾರವನ್ನು ಮರುಪರಿಶೀಲಿಸುವಂತೆ ಕೋರುವುದಾಗಿ ಅಮನ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.