ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆಸ್‌: ಡ್ರಾ ಮಾಡಿಕೊಂಡ ಆನಂದ್‌

Last Updated 22 ಅಕ್ಟೋಬರ್ 2018, 17:40 IST
ಅಕ್ಷರ ಗಾತ್ರ

ಇಸ್ಲೆ ಆಫ್‌ ಮ್ಯಾನ್‌, ಇಂಗ್ಲೆಂಡ್‌: ಭಾರತದ ಗ್ರ್ಯಾಂಡ್‌ ಮಾಸ್ಟರ್‌ ವಿಶ್ವನಾಥನ್ ಆನಂದ್‌, ಇಸ್ಲೆ ಆಫ್‌ ಮ್ಯಾನ್‌ ಇಂಟರ್‌ನ್ಯಾಷನಲ್‌ ಚೆಸ್‌ ಟೂರ್ನಿಯ ಪಂದ್ಯದಲ್ಲಿ ಡ್ರಾ ಮಾಡಿಕೊಂಡಿದ್ದಾರೆ.

ಸೋಮವಾರ ನಡೆದ ಎರಡನೇ ಸುತ್ತಿನ ಹೋರಾಟದಲ್ಲಿ ಐದು ಬಾರಿಯ ವಿಶ್ವ ಚಾಂಪಿಯನ್ ಆನಂದ್‌, ಅಮೆರಿಕದ ರಾಬರ್ಟ್‌ ಹೆಸ್‌ ಜೊತೆ ಪಾಯಿಂಟ್‌ ಹಂಚಿಕೊಂಡರು.

ಇತರ ಪಂದ್ಯಗಳಲ್ಲಿ ವಿದಿತ್‌ ಸಂತೋಷ್‌ ಗುಜರಾತಿ, ದೇವಶಿಶ್‌ ದಾಸ್‌ ಎದುರೂ; ವಿ.ವಿಷ್ಣುಪ್ರಸನ್ನ, ತಮಿರ್‌ ನಬಾಟಿ ಮೇಲೂ; ಹರ್ಷ ಭರತಕೋಟಿ, ಎಸ್‌.ಪಿ.ಸೇತುರಾಮನ್‌ ವಿರುದ್ಧವೂ; ವೈಭವ್‌ ಸೂರಿ, ಡೇನಿಯಲ್‌ ಗೊರ್ಮಾಲಿ ಮೇಲೂ; ಅಭಿಜಿತ್‌ ಗುಪ್ತಾ, ವಲೆರಿಯೊ ಬಿಯಾಂಕೊ ಎದುರೂ; ಹಿಕಾರು ನಕಮುರಾ, ಎಸ್‌.ಕಿದಂಬಿ ವಿರುದ್ಧವೂ ಗೆದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT