ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಸ್‌ಎಸ್‌ಎಫ್‌ ವಿಶ್ವ ಶೂಟಿಂಗ್‌: ಚಿನ್ನಕ್ಕೆ ಗುರಿ ಇಟ್ಟ ಅಂಕುರ್‌ ಮಿತ್ತಲ್‌

ತಂಡ ವಿಭಾಗದಲ್ಲಿ ಕಂಚಿನ ಪದಕ
Last Updated 8 ಸೆಪ್ಟೆಂಬರ್ 2018, 17:20 IST
ಅಕ್ಷರ ಗಾತ್ರ

ಚಾಂಗ್ವಾನ್‌, ದಕ್ಷಿಣ ಕೊರಿಯಾ: ‘ಶೂಟ್‌ ಆಫ್‌’ನಲ್ಲಿ ನಿಖರ ಗುರಿ ಹಿಡಿದು ಕೃತಕ ಹಕ್ಕಿಗಳನ್ನು ಹೊಡೆದುರುಳಿಸಿದ ಭಾರತದ ಅಂಕುರ್‌ ಮಿತ್ತಲ್‌ ಅವರು ಐಎಸ್‌ಎಸ್‌ಎಫ್‌ ವಿಶ್ವ ಶೂಟಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ.

ಶನಿವಾರ ನಡೆದ ಸೀನಿಯರ್‌ ಪುರುಷರ ಡಬಲ್‌ ಟ್ರ್ಯಾಪ್‌ ವಿಭಾಗದ ಫೈನಲ್‌ನಲ್ಲಿ ಅಂಕುರ್‌, ಚೀನಾದ ಯಿಯಾಂಗ್‌ ಯಾಂಗ್‌ ಮತ್ತು ಸ್ಲೊವೇಕಿಯಾದ ಹಬರ್ಟ್‌ ಆ್ಯಂಡ್ರಜೆಜ್‌ ಅವರು ತಲಾ 140 ಸ್ಕೋರ್‌ ಕಲೆಹಾಕಿದರು. ಹೀಗಾಗಿ ವಿಜೇತರನ್ನು ನಿರ್ಧರಿಸಲು ‘ಶೂಟ್‌ ಆಫ್‌’ ಮೊರೆ ಹೊಗಲಾಯಿತು.

ಈ ಅವಕಾಶದಲ್ಲಿ 26 ವರ್ಷ ವಯಸ್ಸಿನ ಅಂಕುರ್‌ 4–3ರಿಂದ ಯಾಂಗ್‌ ಅವರನ್ನು ಮಣಿಸಿದರು. ಶೂಟ್‌ ಆಫ್‌ನ ಎರಡನೇ ಅವಕಾಶದಲ್ಲಿ ಗುರಿ ತಪ್ಪಿದ ಹಬರ್ಟ್‌ ಕಂಚಿನ ಪದಕಕ್ಕೆ ತೃಪ್ತಿಪಟ್ಟರು.ಫೈನಲ್‌ನ ಮೊದಲ ಅವಕಾಶದಲ್ಲಿ 27 ಸ್ಕೋರ್‌ ಸಂಗ್ರಹಿಸಿದ ಅಂಕುರ್‌ ನಂತರದ ನಾಲ್ಕು ಅವಕಾಶಗಳಲ್ಲಿ ಕ್ರಮವಾಗಿ 29, 27, 27 ಮತ್ತು 30 ಸ್ಕೋರ್‌ ಗಳಿಸಿ ಗಮನ ಸೆಳೆದರು.

ತಂಡ ವಿಭಾಗದಲ್ಲಿ ಭಾರತ ಕಂಚಿನ ಪದಕ ಪಡೆಯಿತು. ಅಂಕುರ್‌, ಮೊಹಮ್ಮದ್‌ ಅಸಾಬ್‌ ಮತ್ತು ಶಾರ್ದೂಲ್‌ ವಿಹಾನ್‌ ಅವರಿದ್ದ ತಂಡ 409 ಸ್ಕೋರ್‌ ಸಂಗ್ರಹಿಸಿತು. ಇಟಲಿ (411) ಮತ್ತು ಚೀನಾ (410) ಕ್ರಮವಾಗಿ ಚಿನ್ನ ಮತ್ತು ಬೆಳ್ಳಿಯ ಪದಕಗಳನ್ನು ಗೆದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT