ಯಾಂಕ್ಟನ್: ಜಿದ್ದಾಜಿದ್ದಿನ ಪೈಪೋಟಿಯಲ್ಲಿ ಸೋತ ಭಾರತದ ಜ್ಯೋತಿ ಸುರೇಖಾ ವೆನ್ನಮ್ ಅವರು ವಿಶ್ವ ಆರ್ಚರಿ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು. ಶನಿವಾರ ತಡರಾತ್ರಿ ನಡೆದ ಮಹಿಳೆಯರ ವೈಯಕ್ತಿಕ ಕಂಪೌಂಡ್ ವಿಭಾಗದ ಫೈನಲ್ ಸೆಣಸಾಟದಲ್ಲಿ ಅವರು ಕೊಲಂಬಿಯಾದ ಸಾರಾ ಲೋಪೆಜ್ ಎದುರು ಮಣಿದರು.

ಕೊಲಂಬಿಯಾದ ಆರ್ಚರ್ 146–144ರಿಂದ ಜ್ಯೋತಿ ಅವರಿಗೆ ಸೋಲುಣಿಸಿದರು.

ಪುರುಷರ ವೈಯಕ್ತಿಕ ಕಂಪೌಂಡ್ ವಿಭಾಗದಲ್ಲಿ ಸ್ಪರ್ಧಿಸಿದ್ದ, ಮೂರು ಬಾರಿಯ ವಿಶ್ವಕಪ್ ವಿಜೇತ ಅಭಿಷೇಕ್ ವರ್ಮಾ ಕ್ವಾರ್ಟರ್‌ಫೈನಲ್‌ನಲ್ಲಿ ಮುಗ್ಗರಿಸಿದರು. ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿರುವ ನೆದರ್ಲೆಂಡ್ಸ್‌ನ ಮೈಕ್ ಶೋಲೆಸರ್ ಎದುರು ಅವರು ಕೇವಲ ಒಂದು ಪಾಯಿಂಟ್‌ನಿಂದ (147–148) ಸೋಲು ಕಂಡರು.

ಭಾರತದ ಆರ್ಚರಿ ಪಟುಗಳು ಚಾಂಪಿಯನ್‌ಷಿಪ್‌ನ ಕಂಪೌಂಡ್ ವಿಭಾಗದಲ್ಲಿ ಒಟ್ಟು ಮೂರು ಬೆಳ್ಳಿ ಪದಕಗಳನ್ನು ಗೆದ್ದುಕೊಂಡಂತಾಗಿದೆ. ಶುಕ್ರವಾರ ಮಹಿಳಾ ಮತ್ತು ಮಿಶ್ರ ವಿಭಾಗದ ತಂಡಗಳು ಕೊಲಂಬಿಯಾ ಎದುರು ಮಣಿದು ಎರಡನೇ ಸ್ಥಾನ ಗಳಿಸಿದ್ದವು. ಎರಡೂ ತಂಡಗಳಲ್ಲಿ ಜ್ಯೋತಿ ಸ್ಪರ್ಧಿಸಿದ್ದರು.

ಜ್ಯೋತಿ ಅವರು ನೆದರ್ಲೆಂಡ್ಸ್‌ನ ಡೆನ್ ಬಾಶ್‌ನಲ್ಲಿ ನಡೆದಿದ್ದ 2019ರ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದರು.

‘ಕಳೆದ ಬಾರಿ ಕಂಚು ಬಂದಿತ್ತು. ಈ ಸಲ ಬೆಳ್ಳಿ ಪದಕ ಒಲಿದಿದೆ. ಖುಷಿಯಾಗಿದೆ. ಮುಂದಿನ ಗುರಿ ಏಷ್ಯನ್ ಚಾಂಪಿಯನ್ ಆಗಿದೆ‘ ಎಂದು ಜ್ಯೋತಿ ಹೇಳಿದ್ದಾರೆ.

ನವೆಂಬರ್ 13ರಿಂದ 19ರವರೆಗೆ ಬಾಂಗ್ಲಾದೇಶದ ಢಾಕಾದಲ್ಲಿ ಏಷ್ಯನ್ ಚಾಂಪಿಯನ್‌ಷಿಪ್ ನಿಗದಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.