ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಆರ್ಚರಿ ವಿಶ್ವ ಕಪ್‌ ಫೈನಲ್‌ಗೆ ಭಾರತ ಮಹಿಳಾ ತಂಡ

ಆರ್ಚರಿ ವಿಶ್ವಕಪ್‌ ಸ್ಟೇಜ್ 2
Published 22 ಮೇ 2024, 13:03 IST
Last Updated 22 ಮೇ 2024, 13:03 IST
ಅಕ್ಷರ ಗಾತ್ರ

ಯೆಚಿಯಾನ್ (ದಕ್ಷಿಣ ಕೊರಿಯಾ): ಪ್ರಬಲ ಭಾರತ ಮಹಿಳಾ ಕಾಂಪೌಂಡ್ ತಂಡ, ಆರ್ಚರಿ (ಬಿಲ್ಗಾರಿಕೆ) ವಿಶ್ವ ಕಪ್‌ನಲ್ಲಿ (ಸ್ಟೇಜ್‌ 2) ಬುಧವಾರ ಫೈನಲ್ ತಲುಪಿತು. ಆದರೆ ಪುರುಷರ ತಂಡಕ್ಕೆ ಕಂಚಿನ ಪದಕಕ್ಕೆ ನಡೆದ ನಡೆದ ಸ್ಪರ್ಧೆಯಲ್ಲಿ ಆಸ್ಟ್ರೇಲಿಯಾ ಎದುರು ಸೋತು ಬರಿಗೈಯಲ್ಲಿ ಮರಳಿತು.

ಜ್ಯೋತಿ ಸುರೇಖಾ ವೆನ್ನಂ, ಪರ್ಣೀತ್ ಕೌರ್ ಮತ್ತು ಅದಿತಿ ಸ್ವಾಮಿ ಅವರನ್ನೊಳಗೊಂಡ ಭಾರತ ಮಹಿಳಾ ತಂಡ ಸೆಮಿಫೈನಲ್‌ನಲ್ಲಿ 233–229 ರಿಂದ ಅಮೆರಿಕ ತಂಡವನ್ನು ಸೋಲಿಸಿತು. ಇದೇ ತಂಡ ಶಾಂಘೈನಲ್ಲಿ ಕಳೆದ ತಿಂಗಳು ನಡೆದ ವಿಶ್ವಕಪ್‌ ಸ್ಟೇಜ್‌ 1ನಲ್ಲಿ ಚಿನ್ನದ ಪದಕ ಗಳಿಸಿತ್ತು.

ಶನಿವಾರ ಚಿನ್ನದ ಪದಕಕ್ಕೆ ನಡೆಯುವ ಫೈನಲ್ ಪಂದ್ಯದಲ್ಲಿ ಭಾರತ ತಂಡವು, ವಿಶ್ವ ಕ್ರಮಾಂಕದಲ್ಲಿ ಏಳನೇ ಸ್ಥಾನದಲ್ಲಿರುವ ಟರ್ಕಿಯನ್ನು ಎದುರಿಸಲಿದೆ. ಟರ್ಕಿ ಇನ್ನೊಂದು ಸೆಮಿಫೈನಲ್‌ ಪಂದ್ಯದಲ್ಲಿ ಚಿನ್ನಕ್ಕೆ ನೆಚ್ಚಿನ ತಂಡವಾಗಿದ್ದ ಆತಿಥೇಯ ದಕ್ಷಿಣ ಕೊರಿಯಾ ತಂಡವನ್ನು 234–233 ರಿಂದ ಮಣಿಸಿತು.

ಅರ್ಹತಾ ಸುತ್ತಿನಲ್ಲಿ ಎರಡನೇ ಸ್ಥಾನ ಪಡೆದಿದ್ದ ಭಾರತ ಮಹಿಳಾ ತಂಡ ಕ್ವಾರ್ಟರ್‌ಫೈನಲ್‌ನಲ್ಲಿ ಬೈ ಪಡೆದಿತ್ತು.

ಪ್ರಿಯಾಂಶ್, ಪ್ರಥಮೇಶ್ ಫುಗಯೆ ಮತ್ತು ಅನುಭವಿ ಅಭಿಷೇಕ್‌ ವರ್ಮಾ ಅವರನ್ನು ಒಳಗೊಂಡಿದ್ದ ಪುರುಷರ ತಂಡ ಅರ್ಹತಾ ಸುತ್ತಿನಲ್ಲಿ ನಾಲ್ಕನೇ ಸ್ಥಾನ ಪಡೆದಿತ್ತು. ವಿಶ್ವ ಕ್ರಮಾಂಕದಲ್ಲಿ ಅಗ್ರಸ್ಥಾನದಲ್ಲಿರುವ ಈ ತಂಡ, ತನಗಿಂತ ಕಡಿಮೆ ಕ್ರಮಾಂಕದ ಆಸ್ಟ್ರೇಲಿಯಾಕ್ಕೆ (ಬೇಯ್ಲಿ ವೈಲ್ಡ್‌ಮನ್‌, ಬ್ರಾಂಡನ್‌ ಹಾವ್ಸ್‌ ಮತ್ತು ಜೊನಾಥನ್ ಮಿಲ್ನ್) ಶೂಟ್‌ಆಫ್‌ನಲ್ಲಿ ಮಣಿಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT