ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಚರಿ ವಿಶ್ವ ಗೇಮ್ಸ್: ಅಭಿಷೇಕ್, ಜ್ಯೋತಿಗೆ ಕಂಚು

Last Updated 10 ಜುಲೈ 2022, 11:31 IST
ಅಕ್ಷರ ಗಾತ್ರ

ಬರ್ಮಿಂಗ್‌ಹ್ಯಾಮ್‌: ಭಾರತದ ಅಭಿಷೇಕ್ ವರ್ಮಾ ಹಾಗೂ ಜ್ಯೋತಿ ಸುರೇಖಾ ವೆನ್ನಂ ಅವರು ಇಲ್ಲಿ ನಡೆಯುತ್ತಿರುವ ವಿಶ್ವ ಗೇಮ್ಸ್ ಆರ್ಚರಿಯ ಕಂಪೌಂಡ್‌ ಮಿಶ್ರ ತಂಡ ವಿಭಾಗದಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದಾರೆ.

ಕಂಚಿನ ಪದಕದ ಸುತ್ತಿನಲ್ಲಿ ಭಾರತದ ಜೋಡಿಯು 157–156ರಿಂದ ಮೆಕ್ಸಿಕೊದ ಆ್ಯಂಡ್ರಿಯಾ ಬೆಸೆರ್ರಾ ಮತ್ತು ಮಿಗೆಲ್‌ ಬೆಸೆರ್ರಾ ಅವರನ್ನು ಮಣಿಸಿತು.

ಮೂರು ಸುತ್ತುಗಳ ಹಣಾಹಣಿಯ ಮೊದಲ ಸುತ್ತಿನಲ್ಲಿ ಅಭಿಷೇಕ್– ಜ್ಯೋತಿ ಸಂಪೂರ್ಣ ಮೇಲುಗೈ ಸಾಧಿಸಿದರು. ಆದರೆ ಎರಡನೇ ಸುತ್ತಿನಲ್ಲಿ ತಿರುಗೇಟು ನೀಡಿದ ಮೆಕ್ಸಿಕೊ ಜೋಡಿ ಸಮಬಲ ಸಾಧಿಸುವಲ್ಲಿ ಯಶಸ್ವಿಯಾಯಿತು. ಆದರೆ ನಿರ್ಣಾಯಕ ಸುತ್ತಿನಲ್ಲಿ ಭಾರತದ ಬಿಲ್ಗಾರರು ಒತ್ತಡ ಮೀರುವಲ್ಲಿ ಯಶಸ್ವಿಯಾದರು.

ವಿಶ್ವ ಗೇಮ್ಸ್‌ನಲ್ಲಿ ಭಾರತಕ್ಕೆ ಒಲಿದ ಮೊದಲ ಪದಕ ಇದು ಎಂದು ಭಾರತ ಆರ್ಚರಿ ಸಂಸ್ಥೆ ತಿಳಿಸಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಅಭಿಷೇಕ್ ವರ್ಮಾ ಅವರಿಗೆ 50ನೇ ‘ಪೋಡಿಯಂ ಫಿನಿಶ್‘ ಆಗಿದೆ. ವಿಶ್ವ ಗೇಮ್ಸ್, ವಿಶ್ವ ಚಾಂಪಿಯನ್‌ಷಿಪ್‌, ವಿಶ್ವಕಪ್ ಫೈನಲ್‌, ವಿಶ್ವಕಪ್, ಏಷ್ಯನ್‌ ಗೇಮ್ಸ್, ಏಷ್ಯನ್ ಚಾಂಪಿಯನ್‌ಷಿಪ್‌ ಈ ಎಲ್ಲ ಟೂರ್ನಿಗಳ ಕಂಪೌಂಡ್‌ ವಿಭಾಗದಲ್ಲಿ ಅಭಿಷೇಕ್‌ ಪದಕ ಜಯಿಸಿದಂತಾಗಿದೆ.

ವೈಯಕ್ತಿಕ ವಿಭಾಗದ ಸ್ಪರ್ಧೆಯ ಸೆಮಿಫೈನಲ್‌ನಲ್ಲಿ ಅಭಿಷೇಕ್‌ 141–143ರಿಂದ ಫ್ರಾನ್ಸ್‌ನ ಜೀನ್ ಫಿಲಿಪ್‌ ಬೌಲ್ಚ್‌ ಎದುರು ಸೋತರು. ಕಂಚಿನ ಪದಕದ ಪ್ಲೇ ಆಫ್‌ನಲ್ಲಿ ಅವರು145-148ರಿಂದ ಕೆನಡಾದ ಕ್ರಿಸ್ಟೊಫರ್‌ ಪರ್ಕಿನ್ಸ್ ವಿರುದ್ಧ ಮಣಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT