ವಿಜಯನಗರ, ಬಳ್ಳಾರಿ ಜಿಲ್ಲೆ : ತೆಲಂಗಾಣದ ನಿಖತ್ ಜರೀನ್ ಮತ್ತು ತಮಿಳುನಾಡಿನ ಕಲೈವಾಣಿ, ಇಲ್ಲಿ ನಡೆಯುತ್ತಿರುವ ಮಹಿಳೆಯರ ರಾಷ್ಟ್ರೀಯ ಬಾಕ್ಸಿಂಗ್ ಚಾಂಪಿಯನ್ಷಿಪ್ನ ಫೈನಲ್ ಪ್ರವೇಶಿಸಿದರು. ರೈಲ್ವೆಯ ಸೋನಿಯಾ ಲಾಥರ್ ಮತ್ತು ಹರಿಯಾಣದ ಶಶಿ ಚೋಪ್ರಾ ಕೂಡ ಪ್ರಶಸ್ತಿ ಸುತ್ತು ಪ್ರವೇಶಿಸಿದರು.
ಅಮೋಘ ಪಂಚ್ಗಳೊಂದಿಗೆ ಮಿಂಚಿದ ನಿಖತ್ ಸಮಿಫೈನಲ್ನಲ್ಲಿ ಸುಲಭವಾಗಿ ಎದುರಾಳಿಯನ್ನು ಮಣಿಸಿದರು. ಸೋನಿಯಾ, ಎಐಪಿಯ ಸಂಧ್ಯಾರಾಣಿ ದೇವಿ ವಿರುದ್ಧ 4–1ರಿಂದ ಗೆದ್ದರು. ಶಶಿ ಚೋಪ್ರಾ 57 ಕೆಜಿ ವಿಭಾಗದಲ್ಲಿ ಮಣಿಪುರದ ಶಮೀಮ್ ಬಾನು ಎದುರು 5–0ಯಿಂದ ಗೆದ್ದರು.