ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಾಕಿ: ಕೆನರಾ ಬ್ಯಾಂಕ್‌, ಪೋಸ್ಟಲ್‌ ತಂಡಕ್ಕೆ ಗೆಲುವು

Published 9 ಜುಲೈ 2024, 18:36 IST
Last Updated 9 ಜುಲೈ 2024, 18:36 IST
ಅಕ್ಷರ ಗಾತ್ರ

ಬೆಂಗಳೂರು: ರಾಜಿಂದರ್ ಸಿಂಗ್ ಅವರ ಹ್ಯಾಟ್ರಿಕ್‌ ಗೋಲುಗಳ ನೆರವಿನಿಂದ ಕೆನರಾ ಬ್ಯಾಂಕ್‌ ತಂಡವು ಇಲ್ಲಿ ನಡೆಯುತ್ತಿರುವ ಕರ್ನಾಟಕ ಹಾಕಿ ಲೀಗ್‌ ಚಾಂಪಿಯನಷಿಪ್‌ 8ನೇ ಆವೃತ್ತಿಯ ಪಂದ್ಯದಲ್ಲಿ ಗೆಲುವು ಸಾಧಿಸಿದೆ. 

ಭಾರತೀಯ ಕ್ರೀಡಾ ಪ್ರಾಧಿಕಾರ, ಎಸ್‌ಟಿಸಿ ತಂಡ ಮತ್ತು ಅಕೌಂಟೆಂಟ್ ಜನರಲ್ ಆಫೀಸ್ & ರಿಕ್ರಿಯೇಷನ್ ​​ಕ್ಲಬ್ ನಡುವಿನ ಪಂದ್ಯವು 4–4ರಿಂದ ಡ್ರಾಗೊಂಡಿತು. ಪೋಸ್ಟಲ್‌ ತಂಡವು 3–2ರಿಂದ ಬಾಯ್ಸ್ ಸ್ಪೋರ್ಟ್ಸ್ ಕಂಪನಿ ಎಂಇಜಿ ತಂಡವನ್ನು ಮಣಿಸಿತು. 

ಮಂಗಳವಾರ ನಡೆದ ಪಂದ್ಯದಲ್ಲಿ ಕೆನರಾ ಬ್ಯಾಂಕ್‌ ತಂಡವು 5–2ರಿಂದ ಕರ್ನಾಟಕ ರಾಜ್ಯ ಪೊಲೀಸ್‌ ತಂಡವನ್ನು ಸೋಲಿಸಿತು. ಕೆನರಾ ತಂಡದ ಪರ ರಾಜಿಂದರ್ ಸಿಂಗ್ (9,13 ಮತ್ತು 52ನೇ ನಿ), ಜಸ್ಪಾಲ್ ಸಿಂಗ್ (29ನೇ ನಿ), ಚೇತನ್ ಎಂ.ಕೆ. (32ನೇ ನಿ) ಗೋಲು ಗಳಿಸಿದರು. ಪೊಲೀಸ್‌ ತಂಡದ ಪರ ಮಣಿಕಾಂತ್ ಬಿ, (36ನೇ ನಿ) ಮತ್ತು ವಸಂತ್ ಕುಮಾರ್ (56ನೇ ನಿ) ಗೋಲು ದಾಖಲಿಸಿದರು.

ಯತೀಶ್ ಕುಮಾರ್ (9ನೇ ನಿ), ನಿತಿನ್ ತಿಮ್ಮಯ್ಯ (17ನೇ ನಿ), ಹರೀಶ್ ಮುಟಗಾರ್ (40ನೇ ನಿ) ಮತ್ತು ನಯೀಮುದ್ದೀನ್ (44ನೇ ನಿ) ಗೋಲು ಗಳಿಸಿದರು.

ಭಾರತೀಯ ಕ್ರೀಡಾ ಪ್ರಾಧಿಕಾರ, ಎಸ್‌ಟಿಸಿ  ಪರ ಧನುಷ್ ಕಾವೇರಪ್ಪ (15ನೇ, 20ನೇ ನಿ), ಅರ್ಷದೀಪ್ ಕಪೂರ್ (44ನೇ ನೀ) ಮತ್ತು ಸಾಕ್ಷಾತ್ ಎಂ.ಪಿ. (57ನೇ ನಿ) ಗೋಲು ದಾಖಲಿಸಿದರು.

ಪೋಸ್ಟಲ್‌ ತಂಡವು 3–2ರಿಂದ ಬಾಯ್ಸ್ ಸ್ಪೋರ್ಟ್ಸ್ ಕಂಪನಿ ಎಂಇಜಿ ತಂಡವನ್ನು ಮಣಿಸಿತು. ಪೋಸ್ಟಲ್‌ ಪರವಾಗಿ ರಮೇಶ್ ಎಚ್‌.ಟಿ. (5ನೇ, 25ನೇ ಮತ್ತು 37ನೇ ನಿ), ಹ್ಯಾಟ್ರಿಕ್‌ ಗೋಲು ದಾಖಲಿಸಿದರು,  ಬಾಯ್ಸ್  ಪರ ರಾಮನ್ (30ನೇ ನಿ) ಮತ್ತು ಮಂಜೀತ್ (35ನೇ ನಿ) ಗೋಲು ಗಳಿಸಿದರು.

ಇಂದಿನ ಪಂದ್ಯಗಳು: ಕೆನರಾ ಬ್ಯಾಂಕ್ ವಿರುದ್ಧ ಯುವ ಸಬಲೀಕರಣ ಮತ್ತು ಕ್ರೀಡೆ 'ಎ' ಇಲಾಖೆ ಹಾಗೂ ಕಸ್ಟಮ್ಸ್ ಮತ್ತು ಜಿಎಸ್‌ಟಿ ವಿರುದ್ಧ ಕರ್ನಾಟಕ ರಾಜ್ಯ ಪೊಲೀಸ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT