ಪ್ಯಾರಿಸ್ : ಚೀನಾ ತಂಡವು ಒಲಿಂಪಿಕ್ಸ್‌ನಲ್ಲಿ ಇದೇ ಮೊದಲ ಸಲ ರಿಧಮಿಕ್ ಜಿಮ್ನಾಸ್ಟಿಕ್ಸ್‌ನಲ್ಲಿ ಚಿನ್ನದ ಪದಕ ಜಯಿಸಿತು.
ಐವರು ಮಹಿಳೆಯರ ಚೀನಾ ತಂಡವು ಶನಿವಾರ ನಡೆದ ಫೈನಲ್‌ನಲ್ಲಿ 69.800 ಅಂಕಗಳನ್ನು ಗಳಿಸಿತು. ಎರಡು ವಿಭಾಗಗಳರ್ಳೀ ಫೈನಲ್ ಸುತ್ತು ವಿಂಗಡಣೆಯಾಗಿತ್ತು.
ಮೊದಲನೆಯ ವಿಭಾಗದಲ್ಲಿ ಹೂಪ್‌ಗಳನ್ನು ಮತ್ತು ಎರಡನೇ ವಿಭಾಗದಲ್ಲಿ ರಿಬ್ಬನ್, ಚೆಂಡುಗಳನ್ನು ಬಳಸಿ ಕಸರತ್ತು ತೋರಿಸಿದರು.
ಇಸ್ರೇಲ್ ತಂಡವು ಬೆಳ್ಳಿ ಪದಕ ಜಯಿಸಿತು. ದೇಶಕ್ಕೆ ಲಭಿಸಿದ ಮೊದಲ ರಿಧಮಿಕ್ ಜಿಮ್ನಾಸ್ಟಿಕ್ಸ್ ಪದಕ ಇದಾಗಿದೆ. ಇಟಲಿ ಕಂಚು ಗಳಿಸಿತು.