ಪ್ಯಾರಿಸ್: ದೀರ್ಘಕಾಲದ ಕನಸಾದ 90 ಮೀ. ಎಸೆತದ ಮೈಲಿಗಲ್ಲನ್ನು ಸಾಧಿಸಿರುವ ಭಾರತದ ಜಾವೆಲಿನ್ ಥ್ರೊ ತಾರೆ ನೀರಜ್ ಚೋಪ್ರಾ ಅವರು ಶುಕ್ರವಾರ ನಡೆಯಲಿರುವ ಪ್ಯಾರಿಸ್ ಡೈಮಂಡ್ ಲೀಗ್ನಲ್ಲಿ ಕಣಕ್ಕಿಳಿಯಲಿದ್ದು ಅಗ್ರಸ್ಥಾನದತ್ತ ಗುರಿನೆಟ್ಟಿದ್ದಾರೆ. ಇಲ್ಲಿ ಅವರು ಪರಿಚಿತ ಎದುರಾಳಿಗಳಿರುವ ಪ್ರಬಲ ಕಣದಿಂದ ಪೈಪೋಟಿ ಎದುರಿಸಲಿದ್ದಾರೆ.

ಚೋಪ್ರಾ ಜೊತೆಗೆ ಜರ್ಮನಿಯ ಅನುಭವಿ ಜೂಲಿಯನ್ ವೆಬರ್, ಎರಡು ಬಾರಿಯ ವಿಶ್ವ ಚಾಂಪಿಯನ್ ಆ್ಯಂಡರ್ಸನ್ ಪೀಟರ್ಸ್ (ಗ್ರೆನೆಡಾ) ಸೇರಿದಂತೆ ಎಂಟು ಸ್ಪರ್ಧಿಗಳು ಜಾವೆಲಿನ್ ಥ್ರೊ ಇರುವ ಇರುವ ಎರಡನೇ ಡೈಮಂಡ್ ಲೀಗ್ನಲ್ಲಿ ಕಣಕ್ಕೆ ಇಳಿಯುತ್ತಿದ್ದಾರೆ. ಎಂಟು ಮಂದಿಯಲ್ಲಿ ಐವರು 90 ಮೀ.ಗಿಂತ ದೂರ ಎಸೆದವರು ಇದ್ದಾರೆ.

ಮೇ 16ರಂದು ದೋಹಾದಲ್ಲಿ ನಡೆದ ಡೈಮಂಡ್ ಲೀಗ್ನಲ್ಲಿ ನೀರಜ್ ಮೊದಲ ಬಾರಿ 90 ಮೀ.ಗಿಂತ (90.23 ಮೀ.) ದೂರ ಎಸೆದು ತಮ್ಮ ದೀರ್ಘಕಾಲದ ಗುರಿಯನ್ನು ಈಡೇರಿಸಿಕೊಂಡಿದ್ದರು. ಆದರೆ ಜರ್ಮನಿಯ ದಿಗ್ಗಜ ವೆಬರ್ ತಮ್ಮ ಕೊನೆಯ ಯತ್ನದಲ್ಲಿ ಭರ್ಚಿಯನ್ನು 91.06 ಮೀ. ಎಸೆಯುವ ಮೂಲಕ ಭಾರತದ ಎದುರಾಳಿಯನ್ನು ಹಿಂದೆಹಾಕಿದ್ದರು. ವೆಬರ್ ಸಹ ಅದೇ ಮೊದಲ ಬಾರಿ +90 ಮೀ. ಗುರಿ ಸಾಧಿಸಿದ್ದರು.

31 ವರ್ಷ ವಯಸ್ಸಿನ ವೆಬರ್ ಅವರು ಮೇ 23ರಂದು ಪೋಲೆಂಡ್ನಲ್ಲಿ ನಡೆದ ಯಾನುಝ್ ಕೊಸೊಸಿನ್ಸ್ಕಿ ಸ್ಮರಣಾರ್ಥ ಕೂಟದಲ್ಲೂ ನೀರಜ್ ಅವರನ್ನು ಹಿಮ್ಮೆಟ್ಟಿಸಿದ್ದರು. ಆ ಕೂಟದಲ್ಲಿ ವೆಬರ್ 86.12 ಮೀ. ಮತ್ತು ಚೋಪ್ರಾ 84.14 ಮೀ. ದೂರ ದಾಖಲಿಸಿ ಮೊದಲ ಎರಡು ಸ್ಥಾನ ಪಡೆದಿದ್ದರು. ಪೀಟರ್ಸ್ ಅವರು ದೋಹಾ ಮತ್ತು ಪೋಲೆಂಡ್ ಕೂಟಗಳಲ್ಲಿ ಮೂರನೇ ಸ್ಥಾನ ಗಳಿಸಿದ್ದರು. ಇದು ಈ ಮೂವರ ನಡುವಿನ ಪೈಪೋಟಿಗೆ ಉದಾಹರಣೆ.

ಈಗ ಪ್ಯಾರಿಸ್ನ ಚಾರ್ಲೆಟಿ ಕ್ರೀಡಾಂಗಣದಲ್ಲಿ ಚೋಪ್ರಾ ಅಗ್ರಸ್ಥಾನಕ್ಕೆ ಯತ್ನಿಸಲಿದ್ದಾರೆ. ಕಳೆದ ವರ್ಷ ಒಲಿಂಪಿಕ್ಸ್ನಲ್ಲಿ ಗಮನ ಕೇಂದ್ರೀಕರಿಸುವುದಕ್ಕಾಗಿ ಪ್ಯಾರಿಸ್ ಡೈಮಂಡ್ ಲೀಗ್ನಲ್ಲಿ ಚೋಪ್ರಾ ಪಾಲ್ಗೊಂಡಿರಲಿಲ್ಲ. ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಅವರು ಎರಡನೇ ಸ್ಥಾನ (89.45 ಮೀ.) ಪಡೆದಿದ್ದರು.

2017ರಲ್ಲಿ ಪ್ಯಾರಿಸ್ ಡೈಮಂಡ್ ಲೀಗ್ನಲ್ಲಿ ಮೊದಲ ಬಾರಿ ಭಾಗವಹಿಸಿದ್ದಾಗ ಅವರು ವಿಶ್ವ ಜೂನಿಯರ್ ಚಾಂಪಿಯನ್ ಆಗಿದ್ದರು. ಮೊದಲ ಕೂಟದಲ್ಲಿ ಐದನೇ ಸ್ಥಾನ (84.67) ಗಳಿಸಿದ್ದರು.

ಚೋಪ್ರಾ ಮತ್ತು ವೆಬರ್ ಈ ವರ್ಷ 90 ಮೀ.ಗಳ ಮೈಲಿಗಲ್ಲು ದಾಟಿದರೆ, ಪೀಟರ್ಸ್ ಅವರು 2022ರಲ್ಲೇ ಅದನ್ನು ಸಾಧಿಸಿದ್ದಾರೆ. 2015ರ ವಿಶ್ವ ಚಾಂಪಿಯನ್ ಜೂಲಿಯಸ್ ಯೆಗೊ (ಕೆನ್ಯಾ) ಮತ್ತು 2012ರ ಲಂಡನ್ ಒಲಿಂಪಿಕ್ಸ್ ಚಿನ್ನ ವಿಜೇತ ಕೆಶೊರ್ನ್ ವಾಲ್ಕಾಟ್ (ಟ್ರಿನಿಡಾಡ್) ಅವರು 90 ಮೀ.+ ಕ್ಲಬ್ಗೆ ಸೇರಿದ ಇನ್ನಿಬ್ಬರು.

ಲೂಯಿಸ್ ಮಾರಿಸಿಯೊ ಡ ಸಿಲ್ವ (ಬ್ರೆಜಿಲ್, ಶ್ರೇಷ್ಠ ಸಾಧನೆ 86.34 ಮೀ), ಆಂಡ್ರಿಯನ್ ಮರದಾರೆ (ಮಾಲ್ಡೋವಾ, 86.66 ಮೀ.) ಮತ್ತು ರೆಮಿ ರಗೆಟೆಟ್ (ಫ್ರಾನ್ಸ್) ಕಣದಲ್ಲಿರುವ ಇತರ ಮೂವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.