ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಣಮಟ್ಟದ ಸಿಂಗಲ್ಸ್‌ ಆಟಗಾರರ ಅಗತ್ಯವಿದೆ: ವಿಜಯ್‌ ಅಮೃತ್‌ರಾಜ್‌

Last Updated 23 ಸೆಪ್ಟೆಂಬರ್ 2018, 13:53 IST
ಅಕ್ಷರ ಗಾತ್ರ

ಚೆನ್ನೈ: ‘ಸಿಂಗಲ್ಸ್‌ ವಿಭಾಗದಲ್ಲಿ ದೇಶವನ್ನು ಪ್ರತಿನಿಧಿಸಲು ಗುಣಮಟ್ಟದ ಆಟಗಾರರ ಅಗತ್ಯವಿದೆ’ ಎಂದು ಭಾರತದ ಹಿರಿಯ ಟೆನಿಸ್‌ ಆಟಗಾರ ವಿಜಯ್‌ ಅಮೃತ್‌ರಾಜ್‌ ಹೇಳಿದ್ದಾರೆ.

ಇತ್ತೀಚೆಗೆ ನಡೆದ ಡೇವಿಸ್‌ ಕಪ್‌ ಟೂರ್ನಿಯ ಪ್ಲೇ ಆಫ್‌ ಹಂತದಲ್ಲಿ ಭಾರತದ ಆಟಗಾರರು ಉತ್ತಮ ಸಾಮರ್ಥ್ಯ ತೋರುವಲ್ಲಿ ವಿಫಲರಾಗಿದ್ದರು.

ಈ ಬಗ್ಗೆ ಮಾತನಾಡಿದ ವಿಜಯ್‌, ‘ಆಟಗಾರರು, ಸಿಂಗಲ್ಸ್‌ ವಿಭಾಗದ ಮೇಲೆ ಹೆಚ್ಚು ಗಮನಹರಿಸಬೇಕು. ಈ ವಿಭಾಗದಲ್ಲಿ ಉತ್ತಮವಾಗಿ ಆಡುವ ಕನಿಷ್ಟ ನಾಲ್ಕು ಆಟಗಾರರು ಬೇಕು. ಕೇವಲ ಡಬಲ್ಸ್‌ ವಿಭಾಗದಲ್ಲಿ ಉತ್ತಮವಾಗಿದ್ದರೆ ಸಾಲದು. ಈ ದೆಸೆಯಲ್ಲಿ ಭಾರತದ ಟೆನಿಸ್‌ ಆಟಗಾರರು ಹಿನ್ನೆಡೆ ಅನುಭವಿಸುತ್ತಿದ್ದಾರೆ. ಹೀಗಾಗಿ, ಎಲೀಟ್‌ ಗ್ರೂಪ್‌ಗೆ ಅರ್ಹತೆ ಪಡೆಯುವ ಸಾಧ್ಯವಾಗುತ್ತಿಲ್ಲ’ ಎಂದು ಹೇಳಿದ್ದಾರೆ.

‘ಇತ್ತೀಚಿನ ವರ್ಷಗಳಲ್ಲಿ ರಾಮಕುಮಾರ್‌ ರಾಮನಾಥನ್‌ ಹಾಗೂ ಯೂಕಿ ಭಾಂಬ್ರಿ ಅವರು ಗುಣಮಟ್ಟದ ಆಟವಾಡುತ್ತಿದ್ದಾರೆ. ಆದರೆ, ಈ ಇಬ್ಬರೂ ಆಟಗಾರರು ಫಿಟ್‌ನೆಸ್‌ ಬಗ್ಗೆ ಹೆಚ್ಚು ಕಾಳಜಿವಹಿಸಬೇಕಿದೆ. ಇಡೀ ಋತುವಿನಲ್ಲಿ ಆಯೋಜಿಸುವ ಟೂರ್ನಿಗಳಲ್ಲಿ ಸ್ಪರ್ಧಿಸಲು ದೈಹಿಕವಾಗಿ ಸದೃಢರಾಗಿರಬೇಕು’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

‘ಧೀರ್ಘ ರ‍್ಯಾಲಿಗಳನ್ನು ಆಡಲು ಹೆಚ್ಚಿನ ಶ್ರಮದ ಅಗತ್ಯವಿರುತ್ತದೆ. ಇದರಲ್ಲಿ ವಿಫಲರಾಗುವವರು ಉತ್ತಮ ಸಿಂಗಲ್ಸ್‌ ಆಟಗಾರರಾಗಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ನಮ್ಮ ಆಟಗಾರರು ಸಾಮರ್ಥ್ಯ ವೃದ್ಧಿಸಿಕೊಳ್ಳಬೇಕು’ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT