ಬೆಂಗಳೂರು: ನಗರದ ಪದವಿ ಕಾಲೇಜು ವಿದ್ಯಾರ್ಥಿನಿ ಕೀರ್ತಿ ರಂಗಸ್ವಾಮಿ, ರಾಷ್ಟ್ರೀಯ ಕ್ರೀಡೆಗಳ ಸೈಕ್ಲಿಂಗ್ನಲ್ಲಿ ಗುರುವಾರ ಮೂರನೇ ಚಿನ್ನ ಗೆದ್ದು ಗಮನ ಸೆಳೆದರು.

ನಾಲ್ಕು ದಿನಗಳ ಹಿಂದೆ 10 ಕಿ.ಮೀ. ಸ್ಕ್ರಾಚ್ ರೇಸ್ನಲ್ಲಿ ಚಿನ್ನ ಗೆದ್ದಿದ ಕೀರ್ತಿ ಬುಧವಾರ ಸಂಜೆ 7.5 ಕಿ.ಮೀ. ಕೀರೈನ್ ರೇಸ್ನಲ್ಲಿ ಮತ್ತೊಂದು ಚಿನ್ನ ಗೆದ್ದರು. ಗುರುವಾರ ಒಮ್ನಿಯಂ ರೇಸ್ನಲ್ಲಿ ಕೂಡ ಅಗ್ರಸ್ಥಾನ ಪಡೆದು ಚಿನ್ನಗಳ ಹ್ಯಾಟ್ರಿಕ್ ಪೂರೈಸಿದರು.

ಶೇಷಾದ್ರಿಪುರಂ ಪದವಿ ಕಾಲೇಜಿನಲ್ಲಿ ಅಂತಿಮ ವರ್ಷದ ಬಿ.ಕಾಂ ವಿದ್ಯಾರ್ಥಿನಿ ಆಗಿರುವ ಕೀರ್ತಿ ಈ ಹಿಂದಿನ ರಾಷ್ಟ್ರೀಯ ಕ್ರೀಡೆಗಳಲ್ಲಿ 1 ಚಿನ್ನ, 2 ಬೆಳ್ಳಿ, 1 ಕಂಚಿನ ಪದಕ ಗೆದ್ದುಕೊಂಡಿದ್ದರು. ಗೋವಾದಲ್ಲಿ ನಡೆದಿದ್ದ ರಾಷ್ಟ್ರೀಯ ಕ್ರೀಡೆಗಳ ಸೈಕ್ಲಿಂಗ್ ಸ್ಪರ್ಧೆ ಮಾತ್ರ ದೆಹಲಿಯಲ್ಲಿ ನಡೆದಿತ್ತು. ಕೀರ್ತಿ ಈ ಬಾರಿಯ ಕ್ರೀಡೆಗಳಲ್ಲಿ ತಮ್ಮ ಪದಕ ಸಾಧನೆಗೆ ಇನ್ನಷ್ಟು ಹೊಳಪು ಮೂಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.