ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈಕ್ಲಿಂಗ್ ಚಾಂಪಿಯನ್‌ಷಿಪ್‌: ಕರ್ನಾಟಕದ ಸುಜಲ್‌ಗೆ ಬೆಳ್ಳಿ ಪದಕ

Last Updated 9 ಜನವರಿ 2023, 19:32 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕದ ಸುಜಲ್ ಜಾಧವ್ ಅವರು ರಾಷ್ಟ್ರೀಯ ರಸ್ತೆ ಸೈಕ್ಲಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ.

ಮಹಾರಾಷ್ಟ್ರದ ನಾಸಿಕ್‌ನ ಸಿನ್ನರ್‌ನಲ್ಲಿ ನಡೆಯುತ್ತಿರುವ ಚಾಂಪಿಯನ್‌ಷಿಪ್‌ನಲ್ಲಿ ಸೋಮವಾರ 16 ವರ್ಷದೊಳಗಿನ ಬಾಲಕರ 40 ಕಿಲೊ ಮೀಟರ್‌ ವೈಯಕ್ತಿಕ ರೋಡ್‌ ರೇಸ್‌ನಲ್ಲಿ ಸುಜಲ್‌ 1 ತಾಸು 31 ನಿಮಿಷ 52 ಸೆಕೆಂಡುಗಳಲ್ಲಿ ಗುರಿ ತಲುಪಿದರು.

18 ವರ್ಷದೊಳಗಿನವರ ತಂಡ ವಿಭಾಗದ ಬಾಲಕರ 40 ಕಿ.ಮೀ ಟೈಮ್‌ ಟ್ರಯಲ್‌ನಲ್ಲಿ ರಾಘವೇಂದ್ರ ವಂದಾಲ, ಪ್ರತಾಪ ಪಡಚಿ, ಉದಯ ಗುಳೇದ ಮತ್ತು ಲಕ್ಷ್ಮೀಶ ಎಚ್‌.ಆರ್‌. ಅವರನ್ನೊಳಗೊಳಗೊಂಡ ತಂಡವು ಕಂಚು ಗೆದ್ದಿತು. ಕರ್ನಾಟಕದ ಈ ತಂಡವು 53 ನಿ. 30.94 ಸೆಕೆಂಡುಗಳಲ್ಲಿ ಸ್ಪರ್ಧೆ ಪೂರ್ಣಗೊಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT