ಪ್ಯಾರಿಸ್: ಭಾರತದ ಜ್ಯೋತಿ ಗಡೇರಿಯಾ ಪ್ಯಾರಾಲಿಂಪಿಕ್ಸ್‌ನ ಮಹಿಳೆಯರ (ಸಿ1-3) 3000 ಮೀಟರ್ ವೈಯಕ್ತಿಕ ಪರ್ಸ್ಯೂಟ್ ಸೈಕ್ಲಿಂಗ್ ಸ್ಪರ್ಧೆಯಿಂದ ಹೊರಬಿದ್ದರು.

ಗುರುವಾರ ನಡೆದ ಅರ್ಹತಾ ಸುತ್ತಿನಲ್ಲಿ ಅವರು 10ನೇ ಸ್ಥಾನ ಗಳಿಸಿದರು. ಅವರು 4 ನಿಮಿಷ 53.929 ಸೆಕೆಂಡ್‌ನಲ್ಲಿ ಗುರಿ ತಲುಪಿದರು.

ಚೀನಾದ ವಾಂಗ್ ಕ್ಸಿಯೋಮಿ (3 ನಿಮಿಷ 44.660 ಸೆ) ಮತ್ತು ಬ್ರಿಟನ್‌ನ ಡ್ಯಾಫ್ನೆ ಸ್ಕ್ರಾಗರ್ (3 ನಿ. 45.133 ಸೆ) ಅರ್ಹತಾ ಸುತ್ತಿನಲ್ಲಿ ಕ್ರಮವಾಗಿ ಮೊದಲ ಮತ್ತು ಎರಡನೇ ಸ್ಥಾನ ಪಡೆದು ಚಿನ್ನಕ್ಕಾಗಿ ಸ್ಪರ್ಧಿಸಲಿದ್ದಾರೆ.

ಜರ್ಮನಿಯ ಮೈಕೆ ಹೌಸ್‌ಬರ್ಗರ್ (3:49.444) ಮತ್ತು ಸ್ವಿಟ್ಜರ್ಲೆಂಡ್‌ನ ಫ್ಲುರಿನಾ ರಿಗ್ಲಿಂಗ್ (3:50.347) ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನ ಪಡೆದು ಕಂಚಿಗಾಗಿ ಹೋರಾಟ ನಡೆಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.