ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಜೂಡೊ: ತುಲಿಕಾ ಮಾನ್‌ಗೆ ಪ್ಯಾರಿಸ್ ಟಿಕೆಟ್

Published 26 ಜೂನ್ 2024, 16:00 IST
Last Updated 26 ಜೂನ್ 2024, 16:00 IST
ಅಕ್ಷರ ಗಾತ್ರ

ನವದೆಹಲಿ: ಕಾಮನ್‌ವೆಲ್ತ್‌ ಗೇಮ್ಸ್‌ ಬೆಳ್ಳಿ ಪದಕ ವಿಜೇತೆ ತುಲಿಕಾ ಮಾನ್ ಅವರು ಜೂಡೊದಲ್ಲಿ ಪ್ಯಾರಿಸ್ ಒಲಿಂಪಿಕ್ಸ್‌ ಕೋಟಾ ಪಡೆದುಕೊಂಡಿದ್ದಾರೆ ಎಂದು ಅಂತರರಾಷ್ಟ್ರೀಯ ಸಂಸ್ಥೆ ತಿಳಿಸಿದೆ.

ಅಂತರರಾಷ್ಟ್ರೀಯ ಜೂಡೊ ಫೆಡರೇಷನ್ (ಐಜೆಎಫ್) ಮಂಗಳವಾರ ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಜೂಡೊ ಪಟುಗಳ ಪಟ್ಟಿಯನ್ನು ಪ್ರಕಟಿಸಿದ್ದು, 25 ವರ್ಷದ ತುಲಿಕಾ ಅವರು +78 ಕೆ.ಜಿ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ.  

ದೆಹಲಿಯ ತುಲಿಕಾ ಅವರು 1345 ಅಂಕಗಳೊಂದಿಗೆ 36ನೇ ಸ್ಥಾನ ಪಡೆದಿದ್ದಾರೆ.  

‘ಮುಂದಿನ ಹಂತವು ಜುಲೈ 2 ರಂದು ನಡೆಯಲಿದ್ದು, ಆಗ ಎನ್ಒಸಿಗಳು (ರಾಷ್ಟ್ರೀಯ ಒಲಿಂಪಿಕ್ ಸಮಿತಿಗಳು) ಯಾವ ಕ್ರೀಡಾಪಟುಗಳನ್ನು ಅವರನ್ನು ಪ್ರತಿನಿಧಿಸುತ್ತಾರೆ ಎಂಬುದನ್ನು ತಿಳಿಸಲಿವೆ. ಪ್ರತಿ ಎನ್ಒಸಿಗೆ ಒಬ್ಬ ಜೂಡೊ ಪಟು ಮಾತ್ರ ಪ್ರತಿ ತೂಕ ವಿಭಾಗದಲ್ಲಿ ಭಾಗವಹಿಸಬಹುದು’ ಎಂದು ಐಜೆಎಫ್ ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ.

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಸುಶೀಲಾ ದೇವಿ ಲಿಕ್ಮಾಬಾಮ್ ಜೂಡೊದಲ್ಲಿ ಭಾರತದ ಏಕೈಕ ಸ್ಪರ್ಧಿಯಾಗಿದ್ದರು. ಮಹಿಳೆಯರ 48 ಕೆ.ಜಿ ವಿಭಾಗದಲ್ಲಿ ಅವರು ಆರಂಭಿಕ ಸುತ್ತು ದಾಟಲು ಸಾಧ್ಯವಾಗಲಿಲ್ಲ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT