ಬಟುಮಿ (ಜಾರ್ಜಿಯಾ): ಫಿಡೆ ಮಹಿಳಾ ಚೆಸ್ ವಿಶ್ವಕಪ್ ಗೆದ್ದ ಭಾರತದ ಮೊದಲ ಆಟಗಾರ್ತಿ ಎಂಬ ಕೀರ್ತಿಗೆ ದಿವ್ಯಾ ದೇಶಮುಖ್ ಭಾಜನರಾಗಿದ್ದಾರೆ.

ಜಿದ್ದಾಜಿದ್ದಿನಿಂದ ಸಾಗಿದ ಫೈನಲ್ನಲ್ಲಿ ಭಾರತದವರೇ ಆದ ಗ್ರ್ಯಾಂಡ್ಮಾಸ್ಟರ್ ಕೋನೇರು ಹಂಪಿ ವಿರುದ್ಧ ರೋಚಕ ಟೈ ಬ್ರೇಕರ್ನಲ್ಲಿ ಗೆಲುವು ದಾಖಲಿಸಿದ 19ರ ಹರೆಯದ ದಿವ್ಯಾ ನೂತನ ದಾಖಲೆ ಬರೆದಿದ್ದಾರೆ.

ತಮಗಿಂತಲೂ ಅನುಭವಿ ಆಗಿರುವ 38 ವರ್ಷದ ಹಂಪಿ ಅವರನ್ನು ಮಣಿಸಿದ ಕ್ಷಣವನ್ನು ನಾಗ್ಪುರ ಮೂಲದ ದಿವ್ಯಾ ಅವರಿಗೆ ಅರಗಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ಕೆಲವೇ ಹೊತ್ತಿನಲ್ಲಿ ಅಮ್ಮನ ಬಳಿ ಹೋಗಿ ಪರಸ್ಪರ ತಬ್ಬಿಕೊಂಡು ಆನಂದಭಾಷ್ಪ ಸುರಿಸಿದ್ದಾರೆ. ಪ್ರಸ್ತುತ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.

88ನೇ ಗ್ರ್ಯಾಂಡ್ ಮಾಸ್ಟರ್...

ಈ ಗೆಲುವಿನೊಂದಿಗೆ ದಿವ್ಯಾ ದೇಶಮುಖ್ ಅವರಿಗೆ ಗ್ರ್ಯಾಂಡ್ ಮಾಸ್ಟರ್ ಪಟ್ಟ ಒಲಿದು ಬಂದಿದೆ. ಅಲ್ಲದೆ ಗ್ರ್ಯಾಂಡ್ ಮಾಸ್ಟರ್ ಆದ ಭಾರತದ 88ನೇ ಚೆಸ್ ಪಟು ಎನಿಸಿದ್ದಾರೆ. ಅಲ್ಲದೆ ಹಂಪಿ, ಹರಿಕಾ ಹಾಗೂ ವೈಶಾಲಿ ಬಳಿಕ ಗ್ರ್ಯಾಂಡ್ ಮಾಸ್ಟರ್ ಪಟ್ಟಕ್ಕೇರಿದ ಭಾರತದ ನಾಲ್ಕನೇ ಮಹಿಳಾ ಆಟಗಾರ್ತಿ ಆಗಿದ್ದಾರೆ.
.FIDE Women's World Cup | ಕೋನೇರು ಹಂಪಿ ಮಣಿಸಿದ ದಿವ್ಯಾ ದೇಶಮುಖ್ ಚಾಂಪಿಯನ್.ಮಹಿಳಾ ವಿಶ್ವಕಪ್ ಚೆಸ್: ಹಂಪಿ– ದಿವ್ಯಾ ಫೈನಲ್ ಟೈಬ್ರೇಕರ್ಗೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.