ಪ್ಯಾರಿಸ್: ಏಷ್ಯನ್ ಗೇಮ್ಸ್ ಪದಕ ವಿಜೇತ ಅನುಷ್ ಅಗರವಾಲ್ ಅವರು ಪ್ಯಾರಿಸ್ ಒಲಿಂಪಿಕ್ಸ್ನಿಂದ ಹೊರಬಿದ್ದಿದ್ದಾರೆ. ಬುಧವಾರ ನಡೆದ ವೈಯಕ್ತಿಕ ಡ್ರೆಸೇಜ್ ಸ್ಪರ್ಧೆಯ ತಮ್ಮ ಗುಂಪಿನಲ್ಲಿ ಒಂಬತ್ತನೇ ಸ್ಥಾನ ಪಡೆದು ನಿರಾಸೆ ಮೂಡಿಸಿದರು.

ಅಗರವಾಲ್ ಅವರು ಹಾಂಗ್ಝೌನಲ್ಲಿ ನಡೆದಿದ್ದ 2022ರ ಏಷ್ಯನ್ ಗೇಮ್ಸ್ನಲ್ಲಿ ಗುಂಪು ಮತ್ತು ವೈಯಕ್ತಿಕ ವಿಭಾಗದಲ್ಲಿ ಚಿನ್ನ ಮತ್ತು ಕಂಚು ಗೆದ್ದಿದ್ದ ಅಗರವಾಲ್ ಇಲ್ಲಿ ತಮ್ಮ ಕುದುರೆ ಸರ್ ಕಾರಮೆಲ್ಲೊ ಓಲ್ಡ್ನೊಂದಿಗೆ 66.444 ಅಂಕ ಗಳಿಸಿದರು. ಆದರೆ ಅದು ಪದಕ ಸುತ್ತಿಗೆ ಅವರಿಗೆ ಅರ್ಹತೆ ಪಡೆಯಲು ಸಾಕಾಗಲಿಲ್ಲ.

ಡ್ರೆಸೇಜ್ ಗ್ರ್ಯಾನ್ಪ್ರಿ ವೈಯಕ್ತಿಕ ಅರ್ಹತಾ ಸುತ್ತಿನಲ್ಲಿ ‘ಇ’ ಗುಂಪಿನಲ್ಲಿದ್ದ ಅಗರ್ವಾಲ್ ಒಂಬತ್ತನೇ ಸ್ಥಾನ ಪಡೆದರು. ಹೀಗಾಗಿ ಅವರು ಮೊದಲ ಹಂತದಲ್ಲೇ ಹೊರಬೀಳಬೇಕಾಯಿತು. 24 ವರ್ಷ ವಯಸ್ಸಿನ ಅಗರವಾಲ್ ತಮ್ಮ 17ನೇ ವಯಸ್ಸಿನಿಂದ ಜರ್ಮನಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ.

ಆದರೆ ಅವರ ಸಾಧನೆ ಕಳಪೆ ಎನ್ನುವಂತಿರಲಿಲ್ಲ. ಅವರು ಕನಿಷ್ಠ ಅರ್ಹತಾ ಅಗತ್ಯ (ಎಂಇಆರ್) ನಾಲ್ಕು ಬಾರಿ ಪೂರೈಸಿ ಒಲಿಂಪಿಕ್ಸ್ ಡ್ರೆಸೇಜ್ ಸ್ಪರ್ಧೆಗೆ ಆಯ್ಕೆಯಾದ ಭಾರತದ ಮೊದಲ ಇಕ್ವೆಸ್ಟ್ರಿಯನ್ ಪಟು ಎನಿಸಿದ್ದರು.

ಡೆನ್ಮಾರ್ಕ್ನ ಕ್ಯಾಥರಿನ್ ಲೌಡ್ರುಪ್ ಡ್ಯುಫೋರ್ 80.792 ಅಂಕಗಳೊಂದಿಗೆ ಮೊದಲ ಸ್ಥಾನ ಪಡೆದರು. ಜರ್ಮನಿಯ ಇಸಾಬೆಲ್ ವರ್ಥ್ ಎರಡನೇ ಸ್ಥಾನ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.