ನವದೆಹಲಿ: ಎಫ್ಐಎಚ್ ಪ್ರೊ ಲೀಗ್ ಹಾಕಿ ಟೂರ್ನಿಯ ಎರಡನೇ ಆವೃತ್ತಿಯನ್ನು ಕೊರೊನಾ ಹಾವಳಿಯ ಕಾರಣ ಅಂತರರಾಷ್ಟ್ರೀಯ ಹಾಕಿ ಫೆಡರೇಷನ್ (ಎಫ್ಐಎಚ್) ಮತ್ತೆ ಮುಂಡೂಡಬೇಕಾಗಿದೆ. ಪರಿಸ್ಥಿತಿಯಲ್ಲಿ ಸುಧಾರಣೆ ಕಂಡುಬಂದರೆ ಜುಲೈ ಮತ್ತು ಆಗಸ್ಟ್ನಲ್ಲಿ ಪಂದ್ಯಗಳನ್ನು ನಡೆಸುವ ಬಗ್ಗೆಎಫ್ಐಎಚ್ ಯೋಚಿಸುತ್ತಿದೆ.
ಕೊರೊನಾ ಮಹಾಮಾರಿಯ ಹಿನ್ನೆಲೆಯಲ್ಲಿ ಲೀಗ್ ಅನ್ನು ಈಗಾಗಲೇ ಮೊದಲು ಏಪ್ರಿಲ್ 15ಕ್ಕೆ ಮಂದೂಡಲಾಗಿತ್ತು. ಬಳಿಕ ಮೇ 17ಕ್ಕೆ ದಿನಾಂಕ ನಿಗದಿಗೊಳಿಸಲಾಗಿತ್ತು. ಈಗ ಮತ್ತೆ ಮುಂದಕ್ಕೆ ಹಾಕಲಾಗಿದೆ.