ಲಾಸೇನ್: ಬೆಲ್ಜಿಯಂ ಮತ್ತು ಆರ್ಜೇಂಟಿನಾ ನಡುವೆ ಇದೇ ತಿಂಗಳ 22 ಮತ್ತು 23ರಂದು ನಡೆಯಬೇಕಾಗಿದ್ದ ಎಫ್‌ಐಎಚ್ ಹಾಕಿ ಪ್ರೊ ಲೀಗ್ ಪಂದ್ಯಗಳನ್ನು ಕೋವಿಡ್ ಕಾರಣ ಪ್ರಯಾಣ ನಿರ್ಬಂಧ ಜಾರಿಯಲ್ಲಿರುವ ಕಾರಣ ಮುಂದೂಡಲಾಗಿದೆ.

ಆರ್ಜೆಂಟಿನಾ ತಂಡವು, ನೆದರ್ಲೆಂಡ್ಸ್ ಮಾರ್ಗವಾಗಿ ಬೆಲ್ಜಿಯಮ್‌ಗೆ ತೆರಳಬೇಕಾಗಿತ್ತು. ಆದರೆ ನೆದರ್ಲೆಂಡ್ಸ್‌ನಲ್ಲಿ ಪ್ರಯಾಣ ನಿರ್ಬಂಧವಿರುವ ಕಾರಣ ಅದು ಸಾಧ್ಯವಾಗಿಲ್ಲ. ಬೆಲ್ಜಿಯಮ್‌ಗೆ ಹೋಗಲು ಅನ್ಯಮಾರ್ಗವಿಲ್ಲದ ಕಾರಣ ಆರ್ಜೆಂಟಿನಾ ತಂಡಕ್ಕೆ ಬೇರೆ ವ್ಯವಸ್ಥೆ ಏರ್ಪಾಡು ಆಗಲಿಲ್ಲ. ಕೋವಿಡ್–19 ಸಾಂಕ್ರಾಮಿಕ ತಡೆಯಲು ನೆದರ್ಲೆಂಡ್ಸ್‌ನಲ್ಲಿ ಬಿಗು ನಿರ್ಬಂಧವಿದೆ ಎಂದು ಅಂತರರಾಷ್ಟ್ರೀಯ ಹಾಕಿ ಫೆಡರೇಷನ್ ಹೇಳಿಕೆಯಲ್ಲಿ ತಿಳಿಸಿದೆ.

ಮುಂದೊಂದು ದಿನ ಪಂದ್ಯ ನಡೆಸಲು ಅನುವಾಗುವಂತೆ ಎರಡೂ ದೇಶಗಳ ಹಾಕಿ ಸಂಸ್ಥೆಗಳು ಯೋಜನೆ ರೂಪಿಸುತ್ತಿವೆ. ಬೆಲ್ಜಿಯಂ ಮಹಿಳಾ ತಂಡ ಯೋಜನೆಯಂತೆ ಅಮೆರಿಕ ವಿರುದ್ಧದ ಪಂದ್ಯಗಳನ್ನು ಆ್ಯಂಟ್‌ವರ್ಪ್‌ನಲ್ಲಿ ಆಡಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.