ಒಂದೇ ಹೋಲಿಕೆ ಇರುವ ಏಳು ಜನ ವ್ಯಕ್ತಿಗಳು ಇರುತ್ತಾರೆ ಎಂಬ ನಂಬಿಕೆ ಇದೆ. ಸದ್ಯ ನಡೆಯುತ್ತಿರುವ ವಿಜಯ್ ಹಜಾರೆ ಟ್ರೋಫಿಯಲ್ಲಿ ಮುಂಬೈ ಹಾಗೂ ಸಿಕ್ಕಿಂ ತಂಡಗಳ ನಡುವಿನ ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ಅವರನ್ನೇ ಹೋಲುವ ಇನ್ನೋರ್ವ ಆಟಗಾರ ಮುಂಬೈ ತಂಡದಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾನೆ.

ವಿಜಯ್ ಹಜಾರೆ ಟ್ರೋಫಿಯ ತಮ್ಮ ಕೋಟಾದ ಮೊದಲ ಪಂದ್ಯದಲ್ಲಿ ಮುಂಬೈ ಹಾಗೂ ಸಿಕ್ಕಿಂ ತಂಡಗಳು ಡಿಸೆಂಬರ್ 24ರಂದು ಮುಖಾಮುಖಿಯಾಗಿದ್ದವು. ಈ ಪಂದ್ಯದ ವೇಳೆ ಮುಂಬೈ ತಂಡದ ರೋಹಿತ್ ಶರ್ಮಾ ಮತ್ತು ವಿಕೆಟ್ ಕೀಪರ್ ಹಾರ್ದಿಕ್ ತಾಮೋರ್ ಮೈದಾನದಲ್ಲಿ ಒಟ್ಟಿಗೆ ನಿಂತಾಗ ಅಭಿಮಾನಿಗಳು ರೋಹಿತ್ ಶರ್ಮಾ ಯಾರು? ಎಂಬ ಗೊಂದಲಕ್ಕೆ ಒಳಗಾಗಿದ್ದಾರೆ. ಅದಕ್ಕೆ ಕಾರಣ ಇಬ್ಬರೂ ಕೂಡ ಒಂದೇ ರೀತಿ ಇರುವುದು.
.ಅಂದೇ ನಿವೃತ್ತಿ ನಿರ್ಧಾರ ಮಾಡಿದ್ದೆ: ಕಠಿಣ ದಿನಗಳನ್ನು ನೆನೆದ ರೋಹಿತ್ ಶರ್ಮಾ.ವಿಜಯ್ ಹಜಾರೆ ಟ್ರೋಫಿ: ವಿರಾಟ್ ಕೊಹ್ಲಿಯೇ ಪ್ರಮುಖ ಆಕರ್ಷಣೆ.
ಅಂದಹಾಗೆ ರೋಹಿತ್ ಶರ್ಮಾ ಹಾಗೂ ಹಾರ್ದಿಕ್ ತಾಮೋರ್ ಇಬ್ಬರೂ ಕೂಡ ಒಂದೇ ಎತ್ತರ ಹಾಗೂ ರೂಪದಲ್ಲೂ ಬಹುತೇಕ ಒಂದೇ ತರ ಇರುವುದು ಕಂಡು ಬಂದಿದೆ. ಸದ್ಯ, ಈ ಇಬ್ಬರು ಆಟಗಾರರ ಫೋಟೊಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ. ಅನೇಕರು ಜ್ಯೂನಿಯರ್ ರೋಹಿತ್ ಶರ್ಮಾ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ಹಾರ್ದಿಕ್ ತಾಮೋರ್ ಹಿನ್ನೆಲೆ ಏನು?

28 ವರ್ಷದ ಹಾರ್ದಿಕ್ ತಾಮೋರ್ ಮಹಾರಾಷ್ಟ್ರದ ಠಾಣೆಯವರು. ಬಲಗೈ ಬ್ಯಾಟರ್ ಆಗಿರುವ ಅವರು, ಮುಂಬೈ ತಂಡದ ಪರವಾಗಿ ಎಲ್ಲಾ ಮಾದರಿಯ ಕ್ರಿಕೆಟ್ ಆಡಿದ್ದಾರೆ. ರಣಜಿ ಹಾಗೂ ಲಿಸ್ಟ್ ಎ ಪಂದ್ಯಗಳಲ್ಲಿ ವಿಕೆಟ್ ಕೀಪರ್, ಬ್ಯಾಟರ್ ಆಗಿ ಆಡಿದ್ದಾರೆ.

2020 ರಲ್ಲಿ ಮುಂಬೈ ಪರ ರಣಜಿ ಟ್ರೋಫಿಗೆ ಪದಾರ್ಪಣೆ ಮಾಡಿದ ಅವರು, ನಂತರದ ದಿನಗಳಲ್ಲಿ ಲಿಸ್ಟ್ ಎ ಹಾಗೂ ಟಿ20 ಕ್ರಿಕೆಟ್ಗೂ ಪದಾರ್ಪಣೆ ಮಾಡಿದ್ದಾರೆ. ರಣಜಿ ಟ್ರೋಫಿಯಲ್ಲಿ ಮ್ಯಾಚ್ ವಿನ್ನಿಂಗ್ ಶತಕಗಳನ್ನು ಸಿಡಿಸಿದ್ದಾರೆ. ಮಾತ್ರವಲ್ಲ, ಮುಂಬೈ ತಂಡದ ಪರವಾಗಿ, ಅನೇಕ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡುವ ಮೂಲಕ ಗಮನಸೆಳೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.