ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಲಿಂಪಿಕ್ ಕೋಟಾ ಮೇಲೆ ಫೋಗಾಟ್‌ ಕಣ್ಣು

Published 18 ಏಪ್ರಿಲ್ 2024, 19:51 IST
Last Updated 18 ಏಪ್ರಿಲ್ 2024, 19:51 IST
ಅಕ್ಷರ ಗಾತ್ರ

ಬಿಷ್ಕೆಕ್ (ಕಿರ್ಗಿಸ್ತಾನ): ಎರಡು ಬಾರಿಯ ಒಲಿಂಪಿಯನ್ ವಿನೇಶಾ ಫೋಗಾಟ್ ಅವರು ಶುಕ್ರವಾರ ಇಲ್ಲಿ ಪ್ರಾಂಭವಾಗುವ ಏಷ್ಯಾ ಒಲಿಂಪಿಕ್ ಅರ್ಹತಾ ಪಂದ್ಯಗಳಲ್ಲಿ ಪ್ಯಾರಿಸ್ ಒಲಿಂಪಿಕ್ಸ್‌ ಕೋಟಾ ಸ್ಥಾನಕ್ಕೆ ಭಾರತದ ಇತರೆ 16 ಕುಸ್ತಿಪಟುಗಳೊಂದಿಗೆ ಪೈಪೋಟಿ ನಡೆಸಲಿದ್ದಾರೆ. 

ಭಾರಿ ಮಳೆಯಿಂದಾಗಿ ದೀಪಕ್ ಪುನಿಯಾ ಮತ್ತು ಸುಜೀತ್ ಕಲಕಲ್ ಅವರು ದುಬೈ ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡಿರುವ ಕಾರಣ ನಿಗದಿತ ಸಮಯಕ್ಕೆ ಬಿಷ್ಕೆಕ್ ತಲುಪಲು ಸಾಧ್ಯವಾಗುತ್ತಿಲ್ಲ. ಆದರೆ, ಉಳಿದ 17 ಸದಸ್ಯರ ಭಾರತ ತಂಡ ಬಿಷ್ಕೆಕ್ ತಲುಪಿದೆ.  

ಭಾರತದ ಉಳಿದ ಕುಸ್ತಿಪಟುಗಳಾದ ವಿನೇಶಾ (50 ಕೆಜಿ), ರೀತಿಕಾ ಹೂಡಾ (76 ಕೆಜಿ), ಪ್ರಸ್ತುತ 23 ವರ್ಷದೊಳಗಿನವರ ವಿಶ್ವ ಚಾಂಪಿಯನ್ ಅಂಶು (57 ಕೆಜಿ), ಮಾನ್ಸಿ (62 ಕೆಜಿ) ಮತ್ತು ನಿಶಾ (68 ಕೆಜಿ) ಅವರು ತಮ್ಮ ಕೋಟಾ ಸ್ಥಾನ ಭದ್ರಪಡಿಸಿಕೊಳ್ಳಲು ಇದು ಸಕಾಲವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT