ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ವಲಯ ಈಜು: ಚಿಂತನ್‌, ಅನಿಶ್‌ ನೂತನ ದಾಖಲೆ

Published 28 ಡಿಸೆಂಬರ್ 2023, 15:55 IST
Last Updated 28 ಡಿಸೆಂಬರ್ 2023, 15:55 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕದ ಚಿಂತನ್ ಎಸ್‌.ಶೆಟ್ಟಿ ಮತ್ತು ಅನಿಶ್ ಅನಿರುದ್ಧ ಕೋರೆ, ಬಸವನಗುಡಿ ಈಜು ಕೇಂದ್ರದಲ್ಲಿ ನಡೆಯುತ್ತಿರುವ ದಕ್ಷಿಣ ವಲಯ ಈಜು ಚಾಂಪಿಯನ್‌ಷಿಪ್‌ನ ಎರಡನೇ ದಿನವಾದ ಗುರುವಾರ ನೂತನ ಕೂಟ ದಾಖಲೆ ಬರೆದರು. ಕರ್ನಾಟಕದ ಬಾಲಕರ ತಂಡ ಒಂದನೇ ಗುಂಪಿನ 4x 100 ಮೀ. ಫ್ರೀಸ್ಟೈಲ್ ರಿಲೇಯಲ್ಲೂ ದಾಖಲೆ ಸ್ಥಾಪಿಸಿತು.

ಗುರುವಾರ ಒಟ್ಟು ನಾಲ್ಕು ದಾಖಲೆಗಳು ಮುಳುಗಿದವು. ಮೊದಲ ದಿನ ಬಾಲಕರ ಎರಡನೇ ಗುಂಪಿನ 100 ಮೀ. ಬಟರ್‌ಫ್ಲೈ ಸ್ಪರ್ಧೆಯಲ್ಲಿ ದಾಖಲೆ ಸ್ಥಾಪಿಸಿದ್ದ ಅನಿಶ್, ಎರಡನೇ ದಿನ 50 ಮೀ. ಬಟರ್‌ಫ್ಲೈ ಸ್ಪರ್ಧೆಯನ್ನು 27.80 ಸೆ.ಗಳಲ್ಲಿ ಮುಗಿಸಿ, ತಮಿಳನಾಡಿನ ಕೆ.ದಿವಾಕರ್ ಹೆಸರಿನಲ್ಲಿದ್ದ ದಾಖಲೆ (27.86ಸೆ.) ಮುರಿದರು. ಒಂದನೇ ಗುಂಪಿನ ಇದೇ ಸ್ಪರ್ಧೆಯಲ್ಲಿ ಚಿಂತನ್‌ ಶೆಟ್ಟಿ 26.14 ಸೆ.ಗಳಲ್ಲಿ ಗುರಿತಲುಪಿ, ಆಂಧ್ರದ ಎಂ.ವಾಸುರಾಮ್ ಹೆಸರಿನಲ್ಲಿದ್ದ ದಾಖಲೆ (26.67 ಸೆ.) ಮುಳುಗಿಸಿದರು.

ಚಿಂತನ್‌, ದಿನದ ಕೊನೆಯಲ್ಲಿ ಅಲೈಸ್ಟರ್‌ ಸಾಮ್ಯುಯೆಲ್ ರೇಗೊ, ಶ್ರೇಯಸ್‌ ಮಂಜುನಾಥ್, ಧೋನೀಶ್ ಎನ್. ಜೊತೆಗೂಡಿ ಬಾಲಕರ 4x100 ಮೀ. ಫ್ರೀಸ್ಟೈಲ್ ಸ್ಪರ್ಧೆಯಲ್ಲೂ ದಾಖಲೆ (3ನಿ.43.22 ಸೆ.) ಸ್ಥಾಪಿಸಲು ನೆರವಾದರು. ಹಳೆಯ ದಾಖಲೆ (3:45.45) ಕರ್ನಾಟಕದ ಹೆಸರಿನಲ್ಲೇ ಇತ್ತು.

ಬಾಲಕಿಯರ ಮೂರನೇ ಗುಂಪಿನಲ್ಲಿ ತೆಲಂಗಾಣದ ಶಿವಾನಿ ಕರ‍್ರಾ 400 ಮೀ. ಫ್ರೀಸ್ಟೈಲ್‌ನಲ್ಲಿ ದಾಖಲೆ ಬರೆದರು. ಶಿವಾನಿ 5ನಿ.06.19 ಸೆ.ಗಳಲ್ಲಿ ದೂರ ಪೂರೈಸಿ, ಕಳೆದ ವರ್ಷ ಆಂಧ್ರಪ್ರದೇಶದ ಕೆ.ಲಾಸ್ಯಶ್ರೀ ಹೆಸರಿನಲ್ಲಿದ್ದ ದಾಖಲೆ (5:06.79) ಮುರಿದರು.

ಫಲಿತಾಂಶಗಳು (ಕರ್ನಾಟಕದ ಸ್ಪರ್ಧಿಗಳು):

ಬಾಲಕರು

ಒಂದನೇ ಗುಂಪು: 200 ಮೀ. ಫ್ರೀಸ್ಟೈಲ್‌: ಅಲೈಸ್ಟರ್‌ ಸಾಮ್ಯುಯೆಲ್‌ ರೇಗೊ –1, ಧೋನೀಶ್‌ ಎನ್‌. –2, ಕಾಲ: 2ನಿ.01.42ಸೆ.;   800 ಮೀ. ಫ್ರೀಸ್ಟೈಲ್‌: ಯಜತ್‌ ಅಯ್ಯಪ್ಪ ಕೆ.ಪಿ–1, ರೇಣುಕಾಚಾರ್ಯ ಹೊದಮನಿ –2, ಕಾಲ: 9ನಿ.08.46 ಸೆ.; 50 ಮೀ. ಬಟರ್‌ಫ್ಲೈ: ಚಿಂತನ್‌ ಎಸ್‌.ಶೆಟ್ಟಿ –1, ಸ್ವರೂಪ್‌ ಧನುಚೆ –2, ಕಾಲ: 26.14 ಸೆ. ನೂತನ ದಾಖಲೆ, ಹಳೆಯದು: 26.67 ಸೆ.; 50 ಮೀ. ಬ್ರೆಸ್ಟ್‌ಸ್ಟ್ರೋಕ್‌: ಸೂರ್ಯ ಜೋಯಪ್ಪ ಒ.ಆರ್‌. –1, ವಿಶಾಖನ್‌ ಶರವಣನ್ –3, ಕಾಲ: 31.81 ಸೆ.; 200 ಮೀ. ಬ್ಯಾಕ್‌ಸ್ಟ್ರೋಕ್‌: ಕುಶಲ್‌ ಕೆ. –1, ಯಜತ್ ಅಯ್ಯಪ್ಪ –2, ಕಾಲ: 2ನಿ.17.76 ಸೆ.; 4x100 ಮೀ. ಫ್ರೀಸ್ಟೈಲ್‌ ರಿಲೆ: ಕರ್ನಾಟಕ (ಅಲೈಸ್ಟರ್‌, ಶ್ರೇಯಸ್‌ ಮಂಜುನಾಥ್, ಧೋನೀಶ್‌, ಚಿಂತನ್‌)–1, ಕಾಲ: 3ನಿ.43.32 ಸೆ., ನೂತನ ದಾಖಲೆ, ಹಳೆಯದು: 3ನಿ.45.45 ಸೆ.

ಎರಡನೇ ಗುಂಪು: 200 ಮೀ. ಫ್ರೀಸ್ಟೈಲ್‌: ಶರಣ್‌ ಎಸ್‌. –1, ಸಾತ್ವಿಕ್‌ ನಾಯಕ್ ಸುಜೀರ್ –2, ಕಾಲ: 2ನಿ.06.57 ಸೆ.; 800 ಮೀ. ಫ್ರೀಸ್ಟೈಲ್‌: ಶರಣ್‌ ಎಸ್‌. –1, ಧ್ರುಪದ್‌ ರಾಮಕೃಷ್ಣ –2, ಕಾಲ: 9ನಿ.16.71 ಸೆ.; 50 ಮೀ. ಬಟರ್‌ಫ್ಲೈ: ಅನಿಶ್‌ ಅನಿರುದ್ಧ ಕೋರೆ –1, ದಕ್ಷ್‌ ಮಟ್ಟಾ –2, ಕಾಲ: 27.80 ಸೆ., ನೂತನ ದಾಖಲೆ, ಹಳೆಯದು: 27.86 ಸೆ.; 50 ಮೀ. ಬ್ರೆಸ್ಟ್‌ಸ್ಟ್ರೋಕ್‌: ದಕ್ಷ್‌ ಮಟ್ಟಾ –1, ಸಪ್ತಾಶ್ವ ಬ್ಯಾನರ್ಜಿ –2, ಕಾಲ: 34.03 ಸೆ.; 200 ಮೀ. ಬ್ಯಾಕ್‌ಸ್ಟ್ರೋಕ್‌: ಸಮರ್ಥ್ ಗೌಡ ಬಿ.ಎಸ್‌.–1, ಸಾತ್ವಿಕ್‌ ನಾಯಕ್ ಸುಜೀರ್‌ –2, ಕಾಲ: 2ನಿ.22.66 ಸೆ.; 4x100 ಮೀ. ಫ್ರೀಸ್ಟೈಲ್‌ ರಿಲೆ: ಕರ್ನಾಟಕ (ರಿಶಿತ್‌ ರಂಗನ್, ಅನಿಶ್‌ ಕೋರೆ, ಅಗಸ್ತ್ಯ ಮಂಜುನಾಥ್, ಸಾತ್ವಿಕ್‌ ನಾಯಕ್‌)–1, ಕಾಲ: 3ನಿ.57.91 ಸೆ.

ಮೂರನೇ ಗುಂಪು: 400 ಮೀ. ಫ್ರೀಸ್ಟೈಲ್‌: ರೋನಿತ್‌ ಅರುಣ್‌ ಕುಮಾರ್ –1, ಸೊಮೇಶ್ವರ ಎಸ್‌ –3, ಕಾಲ: 5ನಿ.05.07 ಸೆ.; 50 ಮೀ. ಬ್ರೆಸ್ಟ್‌ಸ್ಟ್ರೋಕ್‌: ರಾಮ್ ಪ್ರಕಾಶ್ –3, ಕಾಲ: 41.22 ಸೆ.; 4x50 ಮೀ. ಫ್ರೀಸ್ಟೈಲ್‌ ರಿಲೆ: ಕರ್ನಾಟಕ (ರೋನಿತ್‌ ಅರುಣ್ ಕುಮಾರ್, ವ್ಯಾಸ್ ವಿಜಯ್, ಆರ್ಯ ಪಿ., ನಿಖಿಲ್ ತೇಜ್ ರೆಡ್ಡಿ)–1, ಕಾಲ: 2ನಿ.03.92ಸೆ.

ಬಾಲಕಿಯರು

ಒಂದನೇ ಗುಂಪು: 200 ಮೀ. ಫ್ರೀಸ್ಟೈಲ್‌: ಸಮನ್ವಿ ಇ.ಎಸ್‌. –1, ಜೇಗಶ್ರೀ ಪೂಜಾ –2, ಕಾಲ: 2ನಿ.19.01 ಸೆ.;  800 ಮೀ. ಫ್ರೀಸ್ಟೈಲ್‌: ಜನ್ಯಾ ಬಿ.ಎಸ್‌. –1, ಆಸ್ರಾ ಸುಧೀರ್ –2, ಕಾಲ: 10ನಿ.00.81ಸೆ.; 50 ಮೀ. ಬಟರ್‌ಫ್ಲೈ: ನೈಶಾ ಶೆಟ್ಟಿ –1, ಇಂಚರಾ ಫಣೀಂದ್ರನಾಥ್ –2, ಕಾಲ: 30.44 ಸೆ.; 50 ಮೀ. ಬ್ರೆಸ್ಟ್‌ಸ್ಟ್ರೋಕ್‌: ಪ್ರತೀಕ್ಷಾ ಶೆಣೈ –1, ಜೇಗಶ್ರೀ ಪೂಜಾ –3, ಕಾಲ: 37.73 ಸೆ.; 200 ಮೀ. ಬ್ಯಾಕ್‌ಸ್ಟ್ರೋಕ್‌: ಸಿದ್ಧಿ ಜಿ. ಶಾ –1, ಶ್ರುತಿ ಕೆ.ಆರ್‌. –2, ಕಾಲ: 2ನಿ.39.60 ಸೆ.; 4x100 ಮೀ. ಫ್ರೀಸ್ಟೈಲ್‌ ರಿಲೆ: ಕರ್ನಾಟಕ (ಜೇಗಶ್ರೀ ಪೂಜಾ, ಸಾಕ್ಷಿ ಎಸ್‌.ದ್ಯಾಮಣ್ಣನವರ, ಸಮನ್ವಿ, ನೈಶಾ)–1, ಕಾಲ: 4ನಿ.25.68 ಸೆ.

ಎರಡನೇ ಗುಂಪು: 200 ಮೀ. ಫ್ರೀಸ್ಟೈಲ್‌: ತ್ರಿಶಾ ಸಿಂಧು ಎಸ್‌. –1, ಶಮನಿ ಎಚ್‌.ಗೌಡ –2, ಕಾಲ: 2ನಿ.20.53 ಸೆ.;  800 ಮೀ. ಫ್ರೀಸ್ಟೈಲ್‌: ತನಿಶಾ ವಿನಯ್ –2, ಹಿತಶ್ರೀ ಎನ್‌. –3, ಕಾಲ: 10ನಿ.26.44 ಸೆ; 50 ಮೀ. ಬಟರ್‌ಫ್ಲೈ: ಚರಿತಾ ಫಣೀಂದ್ರನಾಥ್ –1, ತಿಸ್ಯಾ ಸೋನಾರ್ –3, ಕಾಲ: 30.19 ಸೆ.; 50 ಮೀ. ಬ್ರೆಸ್ಟ್‌ಸ್ಟ್ರೋಕ್‌: ಹಿಯಾ ಮನ್‌ಚಂದಾ –2, ಗಗನಾ ಸಿ.ಎಂ. –2, ಕಾಲ: 37.89 ಸೆ.; 200 ಮೀ. ಬ್ಯಾಕ್‌ಸ್ಟ್ರೋಕ್‌: ತಾನ್ಯಾ ಎಂ.ಎನ್‌. –2, ಕಾಲ: 2ನಿ.33.82 ಸೆ.; 4x100 ಮೀ. ಫ್ರೀಸ್ಟೈಲ್‌ ರಿಲೆ: ಕರ್ನಾಟಕ (ಚರಿತಾ, ತ್ರಿಶಾ, ಶಮನಿ, ತಿಸ್ಯಾ)–1, ಕಾಲ: 4ನಿ.21.64 ಸೆ.

ಮೂರನೇ ಗುಂಪು: 400 ಮೀ. ಫ್ರೀಸ್ಟೈಲ್‌: ಸುಮನ್ವಿ ವಿ. –3, ಕಾಲ: 5ನಿ.13.12 ಸೆ.; 50 ಮೀ. ಬಟರ್‌ಫ್ಲೈ: ಶ್ವಿಥಿ ದಿವಾಕರ ಸುವರ್ಣ –1, ಮಾನ್ಯಾ ಆರ್‌.ವಾಧ್ವಾ –3, ಕಾಲ: 33.36 ಸೆ.; 50 ಮೀ. ಬ್ರೆಸ್ಟ್‌ಸ್ಟ್ರೋಕ್‌: ಇಂಚರಾ ಎಚ್‌.ಆರ್‌. –2, ಮಾನ್ಯ ಆರ್‌.ವಾಧ್ವಾ–3, ಕಾಲ: 40.86 ಸೆ.; 4x50 ಮೀ. ಫ್ರೀಸ್ಟೈಲ್‌ ರಿಲೆ: ಕರ್ನಾಟಕ (ಶ್ರೇಯಾ ಸುರೇಶ್ ಪೂಜಾರ್, ಸುಮನ್ವಿ ವಿ., ಮಾನ್ಯಾ ವಾಧ್ವಾ, ದಿಶಾ ಹೊಂಡಿ)–1, ಕಾಲ: 2ನಿ.06.88 ಸೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT