ನವದೆಹಲಿ: ಹರಿಯಾಣದ ಕ್ರೀಡಾಪಟುಗಳು, ಗುರುವಾರ ಮುಕ್ತಾಯಗೊಂಡ ಎರಡನೇ ಖೇಲೊ ಇಂಡಿಯಾ ಪ್ಯಾರಾ ಗೇಮ್ಸ್ನಲ್ಲಿ ಒಟ್ಟು 34 ಚಿನ್ನದ ಪದಕಗಳನ್ನು ಗೆದ್ದುಕೊಂಡು ಪದಕ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದರು. ಈ ತಂಡ 36 ಬೆಳ್ಳಿ, 29 ಕಂಚಿನ ಪದಕಗಳನ್ನೂ ಬಾಚಿಕೊಂಡಿತು.

ತಮಿಳುನಾಡು (28 ಚಿನ್ನ), ಉತ್ತರ ಪ್ರದೇಶ (23 ಚಿನ್ನ) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದವು.

ಏಳು ದಿನಗಳ ಈ ಕೂಟದಲ್ಲಿ ಮೂರು ತಾಣಗಳಲ್ಲಿ ಪ್ಯಾರಾ ಅಥ್ಲೆಟಿಕ್ಸ್, ಪ್ಯಾರಾ ಅರ್ಚರಿ, ಬ್ಯಾಡ್ಮಿಂಟನ್ ಸೇರಿ ಒಟ್ಟು ಆರು ವಿಭಾಗಗಳಲ್ಲಿ ಸ್ಪರ್ಧೆಗಳು ನಡೆದವು. ಒಟ್ಟು 1,300 ಮಂದಿ ಪಾಲ್ಗೊಂಡಿದ್ದರು.

ಒಟ್ಟು 18 ರಾಷ್ಟ್ರೀಯ ದಾಖಲೆಗಳಾದವು. ಅಥ್ಲೆಟಿಕ್ಸ್ನಲ್ಲಿ ದಾಖಲೆ ಸ್ಥಾಪಿಸಿದವರಲ್ಲಿ ಕರ್ನಾಟಕದ ಶರತ್ ಮಾಕನಹಳ್ಳಿ ಶಂಕರಪ್ಪ ಒಳಗೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.