ಶನಿವಾರ, 2 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನ್‌ಪ್ರೀತ್‌ ಪಡೆಗೆ ಎರಡನೇ ಜಯ

ಎಫ್‌ಐಎಚ್‌ ಸಿರೀಸ್‌ ಫೈನಲ್ಸ್‌ ಹಾಕಿ ಟೂರ್ನಿ: ಜಪಾನ್‌, ರಷ್ಯಾ ಜಯಭೇರಿ
Last Updated 7 ಜೂನ್ 2019, 18:41 IST
ಅಕ್ಷರ ಗಾತ್ರ

ಭುವನೇಶ್ವರ (ಪಿಟಿಐ): ಪೋಲೆಂಡ್‌ ತಂಡವನ್ನು 3-1 ಗೋಲುಗಳಿಂದ ಮಣಿಸಿದ ಭಾರತ ತಂಡ, ಎಫ್‌ಐಎಚ್‌ ಸೀರಿಸ್‌ ಹಾಕಿ ಟೂರ್ನಿಯಲ್ಲಿ ಶುಕ್ರವಾರ ಎರಡನೇ ಗೆಲುವು ದಾಖಲಿಸಿತು.

ತಂಡದ ಪರ ನಾಯಕ ಮನ್‌ಪ್ರೀತ್‌ ಸಿಂಗ್‌ ಅವಳಿ ಗೋಲು (21 ಹಾಗೂ 26ನೇ ನಿಮಿಷ) ಗಳಿಸಿ ಮಿಂಚಿದರು. ಡ್ರ್ಯಾಗ್‌ಫ್ಲಿಕ್ಕರ್‌ ಹರ್ಮನ್‌ಪ್ರೀತ್‌ ಸಿಂಗ್‌ 36ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್‌ ಅವಕಾಶದಲ್ಲಿ ಗೋಲು ತಂದರು.

ಮೇಟ್ಯೂಸ್‌ ಹುಲ್‌ ಬೋಜ್‌(25ನೇ ನಿಮಿಷ) ಪೋಲೆಂಡ್‌ ಪರಏಕೈಕ ಗೋಲು ಅವರಿಂದ ದಾಖಲಾಯಿತು.

ಮತ್ತೊಂದು ಪಂದ್ಯದಲ್ಲಿ ಏಷ್ಯನ್ ಗೇಮ್ಸ್‌ ಚಾಂಪಿಯನ್‌ ಜಪಾನ್ ತಂಡವು ಮೆಕ್ಸಿಕೊ ವಿರುದ್ಧ 3–1ರಿಂದ ಜಯಿಸಿತು. ಉಜ್ಬೇಕಿಸ್ತಾನವನ್ನು 12–1ರಿಂದ ರಷ್ಯಾ ಮಣಿಸಿತು.

ಜಪಾನ್‌ ಈಗಾಗಲೇ ಒಲಿಂಪಿಕ್‌ ಕ್ರೀಡೆಗೆ ಅರ್ಹತೆ ಪಡೆದಿರುವುದರಿಂದ ಈ ಪಂದ್ಯವನ್ನು ಅಭ್ಯಾಸವೆಂಬಂತೆ ಪರಿಗಣಿಸಿತ್ತು.

ಜಪಾನ್‌ ಪರ ಹಿರೊಟಕಾ ಜೆಂಡಾನಾ (3ನೇ, 34ನೇ ನಿಮಿಷ) ಎರಡು ಪೆನಾಲ್ಟಿ ಕಾರ್ನರ್‌ ಅವಕಾಶಗ ಳನ್ನು ಗೋಲಾಗಿ ಪರಿವರ್ತಿಸಿದರು. ಮತ್ತೊಂದು ಗೋಲು (21ನೇ ನಿಮಿಷ) ಶೋಟಾ ಯಮಾಟಾ ಮೂಲಕ ಬಂದಿತು.

ಮೆಕ್ಸಿಕೊ ಪರ ಎರಿಕ್‌ ಹೆರ್ನಾಂಡೆಜ್‌ 3ನೇ ನಿಮಿಷದಲ್ಲಿ ಗೋಲು ದಾಖಲಿಸಿದರು. ಉಜ್ಬೇಕಿಸ್ತಾನ ವಿರುದ್ಧ ರಷ್ಯಾದ ಜಯದಲ್ಲಿ ಸೆಮೆನ್‌ ಮಟ್ಕೊವಿಸ್ಕಿ (ನಾಲ್ಕು ಗೋಲು) ಮಹತ್ವದ ಪಾತ್ರ ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT