ಸೋಫಿಯಾ, ಬಲ್ಗೇರಿಯಾ: ಭಾರತದ ಗ್ರೀಕೊ ರೋಮನ್ ವಿಭಾಗದ ಪೈಲ್ವಾನರು ಇಲ್ಲಿ ನಡೆಯುತ್ತಿರುವ ವಿಶ್ವ ಒಲಿಂಪಿಕ್ಸ್ ಅರ್ಹತಾ ಕುಸ್ತಿ ಟೂರ್ನಿಯಲ್ಲಿ ಶನಿವಾರ ನಿರಾಸೆ ಮೂಡಿಸಿದರು. ಒಬ್ಬರಿಗೂ ಟೋಕಿಯೊ ಟಿಕೆಟ್ ಗಿಟ್ಟಿಸಲು ಸಾಧ್ಯವಾಗಲಿಲ್ಲ.

ಹೆಚ್ಚು ನಿರೀಕ್ಷೆ ಮೂಡಿಸಿದ್ದ ಗುರುಪ್ರೀತ್ ಸಿಂಗ್ (77 ಕೆಜಿ ವಿಭಾಗ) ಅವರು ಪ್ರಿಕ್ವಾರ್ಟರ್‌ಫೈನಲ್ ಬೌಟ್‌ನಲ್ಲಿ ಅಜರ್‌ಬೈಜಾನ್‌ನ ರಫೀಕ್ ಹುಸೇನೊವ್ ಅವರಿಗೆ ಮಣಿದರು. 2020ರ ಯೂರೋಪಿಯನ್ ಚಾಂಪಿಯನ್ ಆಗಿರುವ ಹುಸೇನೊವ್ ಕೇವಲ 48 ಸೆಕೆಂಡುಗಳಲ್ಲಿ ಜಯದ ನಗೆ ಬೀರಿದರು.

ಕಳೆದ ತಿಂಗಳು ಏಷ್ಯನ್ ಅರ್ಹತಾ ಟೂರ್ನಿಯಲ್ಲಿ ಕಂಚಿನ ಪದಕ ಗೆದ್ದಿದ್ದ ಗುರುಪ್ರೀತ್ ಅವರು ಮೊದಲ ಸುತ್ತಿನಲ್ಲಿ ವಾಕ್ ಓವರ್ ಪಡೆದಿದ್ದರು.

ಭಾರತದ ಗ್ರೀಕೊ ರೋಮನ್ ಕುಸ್ತಿಪಟುಗಳು ಒಂದು ಬೌಟ್ ಕೂಡ ಗೆಲ್ಲಲಿಲ್ಲ.

60 ಕೆಜಿ ವಿಭಾಗದಲ್ಲಿ ಸಚಿನ್ ರಾಣಾ, ಆಶು (67 ಕೆಜಿ) ಕೂಡ ಮೊದಲ ಸುತ್ತಿನಲ್ಲೇ ಹೊರಬಿದ್ದರು. ಆಶು ಅವರು ಬೆಲಾರಸ್‌ನ ಅಲೆಕ್ಸಾಂಡರ್ ಲಿಯಾವೊಚಿಕ್ ಎದುರು ಸೋತರು. 87 ಕೆಜಿ ವಿಭಾಗದ ಪ್ರೀಕ್ವಾರ್ಟರ್‌ಫೈನಲ್‌ನಲ್ಲಿ ಸುನಿಲ್ ಕುಮಾರ್ ರಷ್ಯಾದ ದವಿತ್ ಚಾಕ್ವಡ್ಜೆ ಎದುರು ಎಡವಿದರು.

97 ಕೆಜಿ ವಿಭಾಗದ ಪ್ರೀಕ್ವಾರ್ಟರ್‌ಫೈನಲ್‌ನಲ್ಲಿ ದೀಪಾನ್ಷು ಅವರನ್ನು ಸ್ಪೇನ್‌ನ ಜೇಸಸ್ ಗ್ಯಾಸ್ಕಾ ಫ್ರೆಸ್ನಾಂದಾ ಮಣಿಸಿದರು.

ಈ ಟೂರ್ನಿಯ ಸ್ಪರ್ಧೆಗಳಲ್ಲಿ ಫೈನಲ್ ತಲುಪುವ ಇಬ್ಬರಿಗೆ ಮಾತ್ರ ಒಲಿಂಪಿಕ್ಸ್ ಅರ್ಹತೆ ಪಡೆಯುವ ಅವಕಾಶವಿದೆ.

ಈ ಟೂರ್ನಿಯ ಮೂಲಕ ಪುರುಷರ ಫ್ರೀಸ್ಟೈಲ್ ವಿಭಾಗದಲ್ಲಿ ಸುಮಿತ್ ಮಲಿಕ್ (125 ಕೆಜಿ) ಹಾಗೂ ಸೀಮಾ ಬಿಸ್ಲಾ (50 ಕೆಜಿ ಮಹಿಳಾ ವಿಭಾಗ) ಟೋಕಿಯೊ ಟಿಕೆಟ್ ಗಿಟ್ಟಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.