ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ನೆಟ್‌ಬಾಲ್ ತಂಡಕ್ಕೆ ಗಗನಾ ಉಪನಾಯಕಿ

Published 7 ಜೂನ್ 2023, 16:10 IST
Last Updated 7 ಜೂನ್ 2023, 16:10 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕದ ಗಗನಾ ಕೆ.ಎಸ್. ಹಾಗೂ ಬಿ.ಆರ್. ಸುರಭಿ ಅವರು ಏಷ್ಯನ್ ಯೂತ್ ನೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಆಡಲಿರುವ ಭಾರತ ಮಹಿಳಾ ತಂಡಕ್ಕೆ ಆಯ್ಕೆಯಾಗಿದ್ದಾರೆ. ಗಗನಾ ತಂಡದ ಉಪನಾಯಕಿಯೂ ಆಗಿದ್ದಾರೆ.

ಕರ್ನಾಟಕ ಅಮೇಚೂರ್ ನೆಟ್‌ಬಾಲ್ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಸಿ. ಗಿರೀಶ ಅವರು ಈ ತಂಡಕ್ಕೆ ತರಬೇತುದಾರರಾಗಿ ನೇಮಕವಾಗಿದ್ದಾರೆ.  ಗಗನಾ ಅವರು ಬೆಂಗಳೂರಿನ ಶೇಷಾದ್ರಿಪುರಂ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಬಿಬಿಎ ವಿದ್ಯಾರ್ಥಿನಿಯಾಗಿದ್ದಾರೆ. ಸುರಭಿ ಅವರು ಬಿಎಂಎಸ್ ಮಹಿಳಾ ಕಾಲೇಜಿನ ಬಿ.ಕಾಂ ವಿದ್ಯಾರ್ಥಿನಿಯಾಗಿದ್ದಾರೆ.

ದಕ್ಷಿಣ ಕೊರಿಯಾದ ಜಿಯಾಂಜುನಲ್ಲಿ ಇದೇ 10ರಿಂದ 17ರವರೆಗೆ ಟೂರ್ನಿ ನಡೆಯಲಿದೆ ಎಂದು ರಾಜ್ಯ ನೆಟ್‌ಬಾಲ್ ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ. 

ತಂಡ: ಪಲಕ್ (ನಾಯಕಿ), ಗಗನಾ ಕೆ.ಎಸ್. (ಉಪನಾಯಕಿ), ಅಮೃತಾ ಪಿ ಪ್ರಸಾದ್, ಬಿ.ಆರ್. ಸುರಭಿ, ಸುನೈನಾ, ಸೋನಮ್ ಶರ್ಮಾ, ಗೀತಾಂಜಲಿ ಬಗ್ಗಾ, ಖುಷಿ, ಮನೀಷಾ, ಮಹಿ, ದಿವ್ಯಾ ಸಿಂಗ್. ಕೋಚ್: ಸಿ. ಗಿರೀಶ, ಸಹಾಯಕ ಕೋಚ್: ಸೋನಮ್, ಮ್ಯಾನೇಜರ್: ಯಶಸ್ವಿ ಕೌಶಿಕ್,  ಕಾಂಟಿಜೆಂಟ್ ಇನ್‌ಚಾರ್ಜ್: ನಿಶಾಂತ್ ಸಿಂಗ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT