ಪುಣೆ: ಭಾರತದ ಆರ್ಚರಿ ತಂಡದ ನೆರವು ಸಿಬ್ಬಂದಿಯೊಬ್ಬರಿಗೆ ಕೋವಿಡ್–19 ದೃಢಪಟ್ಟಿದೆ. ಇಲ್ಲಿಯ ಸೇನಾ ಕ್ರೀಡಾ ಸಂಸ್ಥೆಯಲ್ಲಿ (ಎಎಸ್ಐ) ತಂಡದ ತರಬೇತಿ ಶಿಬಿರ ನಡೆಯುತ್ತಿದೆ. ಸಿಬ್ಬಂದಿಯಲ್ಲಿ ಸೋಂಕು ಪತ್ತೆಯಾದ ಕಾರಣ ಶಿಬಿರವನ್ನು ಎರಡು ದಿನ ಸ್ಥಗಿತಗೊಳಿಸಲಾಗಿತ್ತು; ಈಗ ಪುನರಾರಂಭಿಸಲಾಗಿದೆ ಎಂದು ಭಾರತ ಕ್ರೀಡಾ ಪ್ರಾಧಿಕಾರ (ಸಾಯ್) ಮಂಗಳವಾರ ತಿಳಿಸಿದೆ.

‘ನಿಯಮಗಳ ಅನ್ವಯ ಶಿಬಿರದಲ್ಲಿ ಪಾಲ್ಗೊಂಡಿರುವ ಎಲ್ಲರಿಗೂ ಕೊರೊನಾ ಸೋಂಕು ಪರೀಕ್ಷೆ ನಡೆಸಲಾಗುವುದು‘ ಎಂದೂ ಸಾಯ್ ಹೇಳಿದೆ.

ಅಕ್ಟೋಬರ್ 30ರಂದು ಕೋವಿಡ್ಗೆ ತುತ್ತಾಗಿರುವ ಸಿಬ್ಬಂದಿಯನ್ನು ಪುಣೆಯ ಹೊರವಲಯದ ಕೋವಿಡ್ ಕೇರ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

‘ಎರಡು ದಿನಗಳವರೆಗೆ ಶಿಬಿರಾರ್ಥಿಗಳನ್ನು ಪ್ರತ್ಯೇಕಿಸಿ ಆಯಾ ಕೋಣೆಗಳಿಗೆ ಸೀಮಿತಗೊಳಿಸುವುದರೊಂದಿಗೆ ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗಿದೆ. ನವೆಂಬರ್ 2ರಿಂದ ಶಿಬಿರವು ಪುನರಾರಂಭಗೊಂಡಿದೆ‘ ಎಂದು ಸಾಯ್ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.