ನವದೆಹಲಿ: 2030ರ ಕಾಮನ್ವೆಲ್ತ್ ಕ್ರೀಡೆಗಳ ಆತಿಥ್ಯದ ವಹಿಸಲು ಭಾರತ ಸಲ್ಲಿಸಿರುವ ಬಿಡ್ಅನ್ನು ಭಾರತ ಒಲಿಂಪಿಕ್ ಸಂಸ್ಥೆ (ಐಒಎ) ಬುಧವಾರ ವಿಶೇಷ ಮಹಾಸಭೆಯಲ್ಲಿ ಅನುಮೋದಿಸಿತು.

‘ಪದಕ ಗೆಲ್ಲುವ ಕ್ರೀಡೆಗಳನ್ನೂ ಸೇರ್ಪಡೆ ಮಾಡುವ ಮೂಲಕ ಭಾರತ ಒಳಗೊಳ್ಳುವಿಕೆಯೊಡನೆ ಕ್ರೀಡೆಗಳನ್ನು ನಡೆಸಲಿದೆ’ ಎಂದು ಸಂಸ್ಥೆಯ ಉನ್ನತ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದರು.

ಅಹಮದಾಬಾದ್ಅನ್ನು ಆತಿಥ್ಯದ ನಗರವಾಗಿ ಹೆಸರಿಸಿ 2030ರ ಕ್ರೀಡೆಗಳನ್ನು ನಡೆಸಲು ಕೇಂದ್ರ ಸರ್ಕಾರ ಈಗಾಗಲೇ ಆಸಕ್ತಿಪತ್ರ ಸಲ್ಲಿಸಿದೆ. ಆದರೆ ಪ್ರಸ್ತಾವಗಳೊಂದಿಗೆ ಭಾರತವು ಆಗಸ್ಟ್ 31ರ ಗಡುವಿನ ಒಳಗೆ ಅಂತಿಮ ಬಿಡ್ ಸಲ್ಲಿಸಬೇಕಾಗುತ್ತದೆ.

ಅಹಮದಾಬಾದ್ ಜೊತೆಗೆ 2010ರಲ್ಲಿ ಆತಿಥ್ಯ ವಹಿಸಿದ್ದ ದೆಹಲಿ ಮತ್ತು ಭುವನೇಶ್ವರ ನಗರಗಳನ್ನೂ ಆತಿಥ್ಯಕ್ಕೆ ಪರಿಗಣಿಸಲಾಗುತ್ತದೆ ಎಂದು ಐಒಎ ಅಧ್ಯಕ್ಷೆ ಪಿ.ಟಿ.ಉಷಾ ಸುಮಾರು ಅರ್ಧಗಂಟೆ ನಡೆದ ಸಭೆಯ ನಂತರ ತಿಳಿಸಿದರು. ಅಂತಿಮವಾಗಿ ಆತಿಥ್ಯ ವಹಿಸುವ ನಗರ ಯಾವುದೆಂಬುದನ್ನು ಶೀಘ್ರವೇ ತಿಳಿಸಲಾಗುವುದು ಎಂದೂ ಹೇಳಿದರು.

‘2026ರ ಗ್ಲಾಸ್ಲೊ ಕಾಮನ್ವೆಲ್ತ್ ಕ್ರೀಡೆಗಳಿಗೆ ಕತ್ತರಿ ಹಾಕಲಾಗಿದೆ. ಆದರೆ ನಾವು 2010ರಲ್ಲಿ ನಡೆಸಿದಂತೆ ಪೂರ್ಣ ಪ್ರಮಾಣದಲ್ಲಿ ನಡೆಸಲಿದ್ದೇವೆ’ ಎಂದರು. ಗ್ಲಾಸ್ಗೊದಲ್ಲಿ ನಡೆಯುವ ಕೂಟಕ್ಕೆ ಪ್ರಮುಖ ಕ್ರೀಡೆಗಳಾದ ಹಾಕಿ, ಬ್ಯಾಡ್ಮಿಂಟನ್, ಕುಸ್ತಿ, ಶೂಟಿಂಗ್ ಅನ್ನು ಕೈಗಬಿಡಲಾಗಿದೆ. ವೆಚ್ಚ ಏರುವ ಕಾರಣ ಈ ನಿರ್ಧಾರಕ್ಕೆ ಆಯೋಜಕರು ಬಂದಿದ್ದಾರೆ.

2030ರ ಆತಿಥ್ಯಕ್ಕೆ ಆಸಕ್ತಿ ತೋರಿದ್ದ ಕೆನಡಾ ಹಿಂದೆ ಸರಿದಿದೆ. ಹೀಗಾಗಿ ಭಾರತಕ್ಕೆ ಆತಿಥ್ಯ ದೊರೆಯುವ ಅವಕಾಶ ಸಾಧ್ಯತೆ ಹೆಚ್ಚಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.